ವಾಷಿಂಗ್ಟನ್: ಪಾಕಿಸ್ತಾನ ಜಗತ್ತಿಗೆ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದು ಅಮೆರಿಕದ ಮಾಜಿ ಸಿಐಎ ಅಧಿಕಾರಿ ಕೆವಿನ್ ಹಲ್ಬರ್ಟ್ ಅವರು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಆರ್ಥಿಕ ಕುಸಿತ, ವಿಪರೀತಗೊಂಡಿರುವ ಉಗ್ರರ ಉಪಟಳ ಮತ್ತು ಅತ್ಯಂತ ವೇಗವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ಕಾರಣ ಜಾಗತಿಕ ಮಟ್ಟದಲ್ಲಿ ಅಪಾಯಕಾರಿ ರಾಷ್ಟ್ರವಾಗಿ ಕಂಡುಬರುತ್ತಿದೆ ಎಂದು ಇಸ್ಲಮಾಬಾದ್ನ ಸಿಐಎ ಸ್ಟೇಷನ್ನ ಮಾಜಿ ಮುಖ್ಯಸ್ಥರಾಗಿದ್ದ ಕೆವಿನ್ ಹಲ್ಬರ್ಟ್ ತಿಳಿಸಿದ್ದಾರೆ.
ಪಾಕಿಸ್ತಾನ ದೊಡ್ಡ ನಷ್ಟ ಹೊಂದಿದ ಅಥವಾ ದೊಡ್ಡ ನಷ್ಟವನ್ನು ಹೊಂದಲು ಸಿದ್ಧಗೊಂಡಿರುವ ಬ್ಯಾಂಕ್ನಂತಿದೆ. ಆರ್ಥಿಕ ಸ್ಥಿತಿ ಮೇಲೆ ದೊಡ್ಡ ದುಷ್ಪರಿಣಾಮ ಎದುರಿಸುತ್ತಿದೆ. ಅಫ್ಘಾನಿಸ್ತಾನದಿಂದ ನಾವು ಸಮಸ್ಯೆಗೆ ಒಳಗಾಗುತ್ತಿದ್ದೇವೆ. ಆಫ್ಘನ್ ಜನಸಂಖ್ಯೆ 330 ಲಕ್ಷ, ಆದರೆ ಪಾಕಿಸ್ತಾನದ ಜನಸಂಖ್ಯೆ 18.20 ಕೋಟಿ, ಅಂದರೆ ಆಫ್ಘಾನ್ಗಿಂತ 5 ಪಟ್ಟು ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರ ಪಾಕಿಸ್ತಾನ. ಆರ್ಥಿಕ ಕುಸಿತ, ಭಯೋತ್ಪಾಧನೆ ಹೆಚ್ಚಳ, ಪರಮಾಣು ಶಸ್ತ್ರ ಹೊಂದುವಿಕೆಯ ಪ್ರಮಾಣ ಹೆಚ್ಚಳ, ಜಾಗತಿಕ 6ನೇ ಅತಿದೊಡ್ಡ ಜನಸಂಖ್ಯೆ ಹೊಂದಿರುವಿಕೆ ಮತ್ತು ವಿಶ್ವದಲ್ಲೇ ಅತಿಹೆಚ್ಚು ಜನನ ಪ್ರಮಾಣ ಹೊಂದಿರುವ ರಾಷ್ಟ್ರ ಪಾಕಿಸ್ತಾನವಾಗಿದೆ. ಇದರಿಂದ ಸಹಜವಾಗೇ ಪಾಕಿಸ್ತಾನ ಅತ್ಯಂತ ಅಪಾಯಕಾರಿಯಾಗಿ ಕಂಡುಬರುತ್ತಿದೆ. ಪಾಕಿಸ್ತಾನ ಜಗತ್ತಿನ ಅತ್ಯಂತ ಅಪಾಯಕಾರಿ ರಾಷ್ಟ್ರವಲ್ಲ, ಆದರೆ ಖಂಡಿತ ಪಾಕ್ ಅಪಾಯಕಾರಿ ರಾಷ್ಟ್ರವಾಗಲಿದೆ ಎಂದು ಹಲ್ಬರ್ಟ್ ಲೇಖನವೊಂದರಲ್ಲಿ ವಿಶ್ಲೇಷಿಸಿದ್ದಾರೆ.