ಸೋಲ್: ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಮುಖ್ಯಸ್ಥ, ಶತಕೋಟ್ಯಾಧೀಶ ಜೇ ವೈ ಲೀ ಅವರನ್ನು ಭ್ರಷ್ಟಾಚಾರ ಆರೋಪದ ಮೇಲೆ ಶುಕ್ರವಾರ ಬಂಧಿಸಲಾಗಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಜೇ ವೈ ಲೀ ಅವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಶ್ರೀಮಂತ ಕುಟುಂಬದಿಂದ ಬಂದ ಲೀ ಈಗ ನಾಲ್ಕು ಮಿಲಿಯನ್ ಡಾಲರ್ ಮನೆಯಿಂಗ ಸಿಂಗಲ್ ಸೆಲ್ ಗೆ ಸ್ಥಳಾಂತರಗೊಂಡಿದ್ದಾರೆ.
ವಾಗ್ದಾಂಡನೆಗೆ ಗುರಿಯಾಗಿರುವ ದಕ್ಷಿಣ ಕೊರಿಯಾ ಅಧ್ಯಕ್ಷೆ ಪಾರ್ಕ್ ಗೀನ್ ಹೈ ಅವರಿಗೆ 36 ದಶಲಕ್ಷ ಡಾಲರ್ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಲೀ ಸೋಲ್ ಸೆಂಟ್ರಲ್ ಜಿಲ್ಲಾ ನ್ಯಾಯಾಲಯದಲ್ಲಿ ಸುಮಾರು ಏಳು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ
ವಿಚಾರಣೆ ವೇಳೆಯೇ ಕೋರ್ಟ್ ಜೇ ವೈ ಲೀ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿ ವಶಕ್ಕೆ ಪಡೆದಿದೆ.