ಭಯೋತ್ಪಾದನೆ 
ವಿದೇಶ

ಡಬಲ್ ಗೇಮ್ ಬುದ್ದಿಯಿಂದಾಗಿ ಪಾಕಿಸ್ತಾನಕ್ಕೆ ಉಗ್ರರನ್ನು ಮಟ್ಟ ಹಾಕಲು ಸಾಧ್ಯವಾಗಿಲ್ಲ: ಅಮೆರಿಕ

ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನ ಡಬಲ್ ಗೇಮ್ ತಂತ್ರವನ್ನು ನಡೆಸುತ್ತಿರುವುದರಿಂದ ತಮ್ಮ ದೇಶದಲ್ಲಿನ ಉಗ್ರರ ಮೇಲೆ ನಿಯಂತ್ರಣ ಸಾಧಿಸಲು...

ವಾಷಿಂಗ್ಟನ್: ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನ ಡಬಲ್ ಗೇಮ್ ತಂತ್ರವನ್ನು ನಡೆಸುತ್ತಿರುವುದರಿಂದ ತಮ್ಮ ದೇಶದಲ್ಲಿನ ಉಗ್ರರ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ಅಮೆರಿಕದ ಸಂಸದ ಬ್ರಾಡ್ ಶೇರ್ಮನ್ ಹೇಳಿದ್ದಾರೆ. 
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ದೀರ್ಘಕಾಲದಿಂದ ಕೆಲವು ಉಗ್ರ ಸಂಘಟನೆಗಳನ್ನು ಪೋಷಿಸುತ್ತಾ ಕೆಲವು ಉಗ್ರ ಸಂಘಟನೆಗಳನ್ನು ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳುತ್ತಿದೆ. ಹೀಗಾಗಿ ದೇಶದಲ್ಲಿ ನಡೆಯುವ ಉಗ್ರ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಭಯೋತ್ಪಾದನೆ ವಿರುದ್ಧ ಡಬಲ್ ಗೇಮ್ ತಂತ್ರವನ್ನು ಕೈಬಿಟ್ಟರೆ ಮಾತ್ರ ಪಾಕಿಸ್ತಾನ ಉಗ್ರರ ವಿರುದ್ಧದ ಸಮರದಲ್ಲಿ ಜಯ ಸಿಗಬಹುದು ಎಂದರು. 
ಇಸ್ಲಾಮಿಕ್ ಸ್ಟೇಟ್ ಉಗ್ರರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿನ ಸೂಫಿ ದರ್ಗಾದ ಮೇಲೆ ಬಾಂಬ್ ದಾಳಿ ನಡೆಸಿದ್ದು ಇದರಲ್ಲಿ 80 ಮಂದಿ ಬಲಿಯಾಗಿದ್ದರು. ಈ ಉಗ್ರರ ಕೃತ್ಯವನ್ನು ಖಂಡಿಸಿ ಮಾತನಾಡಿದ ಶೇರ್ಮನ್ ಅವರು ಪಾಕಿಸ್ತಾನದ ಡಬಲ್ ಗೇಮ್ ಬುದ್ಧಿ ಇಂದು ಪಾಕಿಸ್ತಾನಕ್ಕೆ ಮುಳುವಾಗಿದೆ ಎಂದರು. 
ತನ್ನ ಲಾಭಕ್ಕಾಗಿ ಪಾಕಿಸ್ತಾನ ಐಎಸ್ಐ ಆಯ್ದ ಕೆಲವು ಉಗ್ರ ಸಂಘಟನೆಗಳನ್ನು ಬಳಸಿಕೊಳ್ಳುತ್ತಿದೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!