ವಿದೇಶ

ಸೌತ್ ಚೀನಾ ಸಮುದ್ರದಲ್ಲಿ ಗಸ್ತು ಪ್ರಾರಂಭಿಸಿದ ಅಮೆರಿಕಾ ನೌಕಾದಳ

Guruprasad Narayana
ವಾಷಿಂಗ್ಟನ್: ಸೌತ್ ಚೀನಾ ಸಮುದ್ರದಲ್ಲಿ ಅಮೆರಿಕಾ ನೌಕಾದಳಕ್ಕೆ ಸೇರಿದ ದಾಳಿಸಜ್ಜಿತ ವಿಮಾನ ಗಸ್ತು ಪ್ರಾರಂಭಿಸಿದೆ ಎಂದು ಅಧಿಕೃತ ಹೇಳಿಯೇ ತಿಳಿಸಿದೆ. 
ಅಮೆರಿಕಾ ನೌಕಾದಳ ನೀಡಿರುವ ಹೇಳಿಕೆಯಲ್ಲಿ ಶನಿವಾರ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್ (ಸಿ ಎಸ್ ಜಿ ೧) ಮಾಮೂಲು ಗಸ್ತು ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ತಿಳಿಸಿದೆ. 
"ಸೌತ್ ಚೀನಾ ಸಮುದ್ರದಲ್ಲಿ ಈ ಗಸ್ತು ಕಾರ್ಯಾಚರಣೆಗೂ ಮುಂಚಿತವಾಗಿ, ಹವಾಯಿ ದ್ವೀಪಗಳ ಸನಿಹದಲ್ಲಿ ಹಡಗುಗಳು ಮತ್ತು ಶಸ್ತ್ರಸಜ್ಜಿತ ವಿಮಾನಗಳು ತಾಲೀಮು ಕೂಡ ನಡೆಸಿವೆ ಮತ್ತು ಇದು ಸದಾ ಸಿದ್ಧವಾಗಿರುವುದಕ್ಕೆ ಸಹಕರಿಸುತ್ತದೆ" ಎಂದು ಕೂಡ ಹೇಳಿಕೆ ತಿಳಿಸಿದೆ. 
ಈ ಭಾಗದಲ್ಲಿ ಚೈನಾದ ಸಾರ್ವಭೌಮತ್ವಕ್ಕೆ ಸವಾಲೆಸೆವುದರ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯ ಬುಧವಾರ ಅಮೆರಿಕಾಗೆ ನೀಡಿದ ಎಚ್ಚರಿಕೆಯ ಹಿನ್ನಲೆಯಲ್ಲಿ ಈ ಬೆಳವಣಿಗೆಗಳು ನಡೆದಿವೆ. 
ಈಗ ಅಮೆರಿಕಾ ವಿಮಾನಗಳು ಗಸ್ತು ಸುತ್ತುತ್ತಿರುವ ಪ್ರದೇಶ ವಿವಾದಾತ್ಮಕ ಜಾಗವಾಗಿದೆ; ಈ ವಿವಾದಾತ್ಮಕ ಸಮುದ್ರ ಗಡಿಯಲ್ಲಿ ಚೈನಾ ತನ್ನದೇ ಅಧಿಪತ್ಯ ಎಂದು ಹೇಳಿಕೊಂಡು ಬಂದಿದ್ದರು ಹಲವು ಪೂರ್ವ ಏಷಿಯಾ ರಾಷ್ಟ್ರಗಳು ಆ ಪ್ರದೇಶದ ಮೇಲೆ ಹಕ್ಕು ಸಾಧಿಸಿವೆ ಎಂದು ವಾಯ್ಸ್ ಆಫ್ ಅಮೆರಿಕ ಹೇಳಿದೆ. 
ಸೌತ್ ಚೀನಾ ಸಮುದ್ರದ ಭಾಗಗಳಿಗಾಗಿ ಚೈನಾ ಜೊತೆಗೆ ಸ್ಪರ್ಧಿಸಿಯಿರುವ ಇತರ ರಾಷ್ಟ್ರಗಳೆಂದರೆ ಕಾಂಬೋಡಿಯಾ, ಇಂಡೋನೇಷಿಯಾ, ಮಲೇಷಿಯಾ, ದ ಫ್ಲಿಲಿಪೈನ್ಸ್, ಸಿಂಗಾಪುರ್, ಥೈಲಾಂಡ್ ಮತ್ತು ವಿಯೆಟ್ನಾಮ್. 
ತೈವಾನ್ ಕೂಡ ಕೆಲವು ಪ್ರದೇಶಗಳ ಮೇಲೆ ಹಕ್ಕು ಸಾಧಿಸುತ್ತದೆ. 
SCROLL FOR NEXT