ವಿದೇಶ

ನೇಪಾಳದಲ್ಲಿ ಪ್ರಬಲ ಭೂಕಂಪನ; ರಿಕ್ಟರ್ ಮಾಪಕದಲ್ಲಿ 5 ರಷ್ಟು ತೀವ್ರತೆ ದಾಖಲು

Srinivasamurthy VN

ಕಠ್ಮಂಡು: ನೇಪಾಳ ರಾಜಧಾನಿ ಕಠ್ಮಂಡು ಬಳಿ ಸೋಮವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5 ರಷ್ಟು ತೀವ್ರ ದಾಖಲಾಗಿದೆ.

ನೇಪಾಳದ ರಾಷ್ಟ್ರೀಯ ಭೂಕಂಪನ ಕೇಂದ್ರ ನೀಡಿರುವ ಮಾಹಿತಿಯಂತೆ ರಾಜಧಾನಿ ಕಠ್ಮಂಡು ಪ್ರಾಂತ್ಯದಲ್ಲಿ ಬೆಳಗ್ಗೆ 9.33ರ ಸುಮಾರಿನಲ್ಲಿ ಭೂಮಿ ಕಂಪಿಸಿದ್ದು, ಕಂಪನದ ಕೇಂದ್ರ ಬಿಂದು ಪಶ್ಚಿಮ ನೇಪಾಳದ ಸ್ವನ್ರಾ ಪ್ರದೇಶದಲ್ಲಿ  ದಾಖಲಾಗಿದೆ. ಇದರ ಬೆನ್ನಲ್ಲೇ ಕೇಂದ್ರ ನೇಪಾಳದ ಸಲು ಪ್ರದೇಶದಲ್ಲಿ ಮತ್ತೊಂದು ಕಂಪನ ದಾಖಲಾಗಿದ್ದು, ರಿಕ್ಟರ್ ಮಾಪಕದಲ್ಲಿ 4.7ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದಿಂದಾಗಿ ಸಲು ಮತ್ತು ಲ್ವನ್ರಾ ಪ್ರದೇಶದಲ್ಲಿ ಕೆಲ  ಕಟ್ಟಡಗಳು ಬಿರುಕು ಬಿಟ್ಟಿವೆಯಾದರೂ, ಯಾವುದೇ ರೀತಿಯ ಸಾವು--ನೋವುಗಳಾದ ಕುರಿತು ವರದಿಯಾಗಿಲ್ಲ.

ಈ ಹಿಂದೆ 2015ರಲ್ಲಿ ಸಂಭವಿಸಿದ್ದ ಬರೊಬ್ಬರಿ 7.5 ತೀವ್ರತೆಯ ಭೂಕಂಪನದಿಂದಾಗಿ ಸುಮಾರು 8 ಸಾವಿರ ಮಂದಿ ಸಾವಿಗೀಡಾಗಿದ್ದರು. ಅಂದಿನಿಂದ ಇಂದಿನವರೆಗೂ ನೇಪಾಳದಲ್ಲಿ ಸುಮಾರು 478 ಲಘು ಭೂಕಂಪನಗಳು  ಸಂಭವಿಸಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT