ನ್ಯೂಯಾರ್ಕ್: ಹೊಸ ವರ್ಷದ ಹಿಂದಿನ ದಿನ ಹಾಲಿವುಡ್ ಸಿನಿಮಾ ಶೈಲಿಯಲ್ಲಿ ದರೋಡೆ ನಡೆಸಿರುವ ದರೋಡೆಕೋರರು ಸುಮಾರು 6 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ಮಾಸ್ಕ್ ಧರಿಸಿದ್ದ ಮೂವರು ದರೋಡೆಕೋರರು, ಭಾನುವಾರ ರಾತ್ರಿ ನ್ಯೂಯಾರ್ಕ್ ನ ಮ್ಯಾನ್ ಹಟಾನ್ ಆಭರಣ ಮಳಿಗೆಗೆ ನುಗ್ಗಿ ಭಾರಿ ಮೊತ್ತದ ಚಿನ್ನಾಭರಣ ಕದ್ದು ಅಲ್ಲಿಂದ ಓಡಿ ಕಾಲ್ಕಿತ್ತಿದ್ದಾರೆ.
ಟೈಮ್ಸ್ ಸ್ಕ್ವೇರ್ ನ ಇನ್ನಿತರ ಬ್ಲಾಕ್ ಗಳಲ್ಲಿ ಸುಮಾರು 67 ಸಾವಿರ ಮಂದಿ ಪೊಲೀಸರು ಕಾವಲು ಕಾಯುತ್ತಿದ್ದರು, ಆರೋಪಿಗಳು ಆಭರಣ ಕಕದ್ದು ಪರಾರಿಯಾಗಿದ್ದಾರೆ.
ಆಭರಣ ಮಳಿಗೆಯ ಒಳಗಿನವರಗೆ ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಸುಮಾರು 6 ಮಿಲಿಯನ್ ಡಾಲರ್ ಮೌಲ್ಯದ ಚಿನ್ನಾಭರಣ ಕಳ್ಳತನ ವಾಗಿರಬಹುದೆಂದು ಅಂದಾಜು ಮಾಡಲಾಗಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆರೋಪಿಗಳು ದರೋಡೆ ಮಾಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ.
ಗ್ರೇಗ್ ರೂತ್ ಆಭರಣ ಮಳಿಗೆಯಲ್ಲಿರುವ ಕ್ಯಾಮೆರಾದಲ್ಲಿ ಆರೋಪಿಗಳ ಚಲನವಲನ ಗಳು ದಾಖಲಾಗಿವೆ. ಈ ಮಳಿಗೆಯಲ್ಲಿ ಪ್ರಸಿದ್ಧ ಹಾಗೂ ಅಪರೂಪದ ಹಳದಿ ಮತ್ತು ಪಿಂಕ್ ವಜ್ರಗಳನ್ನು ಕದಿಯುತ್ತಿರುವುದು ದಾಖಲಾಗಿದೆ.ದರೋಡೆಕೋರರಲ್ಲಿ ಒಬ್ಬ ಗಡ್ಡ ಬಿಟ್ಟಿದ್ದು, ಬಿಳಿ ಬಣ್ಣದವನಾಗಿದ್ದಾನೆ. ಆತ ಮಾಸ್ಕ್ ಧರಿಸಿರಲಿಲ್ಲ, ಆತ ನೇರವಾಗಿ ಕ್ಯಾಮೆರಾ ನೋಡಿಕೊಂಡೇ ಕಳ್ಳತನ ಮಾಡಿರುವುದು ದೃಶ್ಯಾವಳಿಗಳಲ್ಲಿ ದಾಖಲಾಗಿದೆ.
ನಂತರ ಅವರು ಅಲ್ಲಿಂದ ಪ್ರವೇಶ ದ್ವಾರಕ್ಕೆ ಬಂದು, ಆರನೇ ಮಹಡಿಗೆ ಬಂದು, ಬೀಗ ಒಡೆಯಲು ಸುತ್ತಿಗೆ ಬಳಸಿದ್ದಾನೆ. ಇನ್ನೂ ಆ ಕೊಠಡಿಗೆ ಬಂದ ದರೋಡೆಕೋರರು 18 ಕ್ಯಾರೆಟ್ ನ ಚಿನ್ನದ ಬ್ರೇಸ್ ಲೆಟ್ ಹಾಗೂ ಕಿವಿಯೊಲೆ ಮತ್ತು ನೆಕ್ ಲೇಸ್ ಗಳಲ್ಲಿದ್ದ ವಜ್ರಗಳನ್ನು ಗ್ಲೋವ್ಸ್ ಹಾಕಿಕೊಂಡು ಹೊರತೆಗೆದಿದ್ದಾರೆ.
ಸೇಫ್ ಲಾಕರ್ ಓಪನ್ ಮಾಡುವಾಗ ದರೋಡೆಕೋರನೊಬ್ಬ ಮೊಬೈಲ್ ಫೋನ್ ನಲ್ಲಿ ಮಾತನಾಡಿರುವುದು ಕ್ಯಾಮೆರಾದಲ್ಲಿ ದಾಖಲಾಗಿದೆ. 16 ಮಹಡಿಗಳ ಕಟ್ಟಡದಿಂದ ಸುರಂಗ ಮಾರ್ಗದ ಮೂಲಕ ದರೋಡೆಕೋರರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಆಭರಣ ಮಳಿಗೆಯ ಮಾಲೀಕ ಭಾರತದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.