ಪ್ಯಾರಿಸ್: ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯಲ್ ಮ್ಯಾಕ್ರಾನ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ 23 ವರ್ಷದ ವ್ಯಕ್ತಿಯನ್ನು ಬಂಧಿಸಿಲಾಗಿದೆ ಎಂದು ಸೋಮವಾರ ನ್ಯಾಯಾಂಗದ ಮೂಲಗಳು ತಿಳಿಸಿವೆ.
ಫ್ರೆಂಚ್ ಅಧ್ಯಕ್ಷರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಸ್ವಯಂ ಘೋಷಿಸಿದ ರಾಷ್ಟ್ರೀಯವಾದಿಯನ್ನು ಕಳೆದ ಬುಧವಾರ ಬಂಧಿಸಲಾಗಿದ್ದು, ತನಿಖೆಯ ವೇಳೆ ಜುಲೈ 14ರಂದು ಪ್ಯಾರಿಸ್ ನಲ್ಲಿ ನಡೆಯಲಿದ್ದ ರಾಷ್ಟ್ರ ದಿನಾಚರಣೆ ಪರೇಡ್ ವೇಳೆ ಮ್ಯಾಕ್ರಾನ್ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಮೂಲಗಳು ತಿಳಿಸಿವೆ.
ಬಂಧಿತ ಆರೋಪಿ ಮುಸ್ಲಿಮರು, ಯಹೂದಿಗಳು, ಕರಿಯರು ಹಾಗೂ ಸಲಿಂಗಕಾಮಿಗಳ ಮೇಲೂ ದಾಳಿ ಮಾಡಲು ಸಂಚು ರೂಪಿಸಿದ್ದ ಎಂದು ಮೂಲಗಳು ಹೇಳಿವೆ.
ಫ್ರೆಂಚ್ ಅಧ್ಯಕ್ಷರ ಹತ್ಯೆಗಾಗಿ ಬಂದೂಕು ಖರೀದಿಸಿಲು ಯತ್ನಿಸಿದ್ದ ವ್ಯಕ್ತಿಯನ್ನು ಕಳೆದ ಬುಧವಾರ ವಾಯುವ್ಯ ಪ್ಯಾರಿಸ್ ಉಪನಗರ ಅರ್ಜೆಂಟೆಯಿಲಿಯಲ್ಲಿರುವ ಆತನ ಮನೆಯಲ್ಲಿ ಪೊಲೀಸರು ಬಂಧಿಸಿದ್ದರು.