ವಿದೇಶ

ಜಿ-20 ಶೃಂಗಸಭೆ: ಹ್ಯಾಮ್ ಬರ್ಗ್ ತಲುಪಿದ ಪ್ರಧಾನಿ ಮೋದಿ

Manjula VN
ಹ್ಯಾಮ್ ಬರ್ಗ್: ಜಿ-20 ದೇಶಗಳ ಎರಡು ದಿನಗಳ ಶೃಂಗಸಭೆ ಆರಂಭವಾಗುತ್ತಿದ್ದು, 3 ಮೂರು ದಿನಗಳ ಐತಿಹಾಸಿಕ ಇಸ್ರೇಲ್ ಭೇಟಿ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಶುಕ್ರವಾರ ಜರ್ಮನಿಯ ಹ್ಯಾಮ್ ಬರ್ಗ್'ಗೆ ತಲುಪಿದ್ದಾರೆ. 
ಇಸ್ರೇಲ್ ಭೇಟಿ ಬಳಿ ಹ್ಯಾಮ್ ಬರ್ಗ್ ಗೆ ತಲುಪಿರುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಶೃಂಗಸಭೆಯಲ್ಲಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಒಪ್ಪಂದಗಳು ನಡೆಯುತ್ತವೆ ಎಂದು ಹೇಳಿದ್ದಾರೆ. 
ಇಂದಿನಿಂದ ಆರಂಭವಾಗುವ ಶೃಂಗಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ನಾಯಕರ ಸಭೆ ನಡೆಯಲಿದೆ. ಜಿ-20 ಶೃಂಗಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟ, ಹವಾಮಾನ ವೈಪರೀತ್ಯ ತಡೆಗೆ ಕ್ರಮಗಳು ಹಾಗೂ ಜಾಗತಿಕ ವ್ಯಾಪಾರ ಸೇರಿದಂತೆ ಇನ್ನಿತರೆ ಮುಖ್ಯ ವಿಚಾರಗಳ ಕುರಿತಂತೆ ಬ್ರಿಕ್ಸ್ ರಾಷ್ಟ್ರಗಳ ನಾಯಕರು ಚರ್ಚೆ ನಡೆಸಲಿದ್ದಾರೆ. 
ಶೃಂಗಸಭೆಗೂ ಮುನ್ನ ಅರ್ಜೆಂಟೀನಾ, ಕೆನಡಾ, ಆಸ್ಟ್ರೇಲಿಯಾ, ಇಟಲಿ, ಜಪಾನ್, ಮೆಕ್ಸಿಕೋ, ರಿಪಬ್ಲಿಕ್ ಆಫ್ ಕೊರಿಯಾ, ಬ್ರಿಟನ್ ಮತ್ತು ವಿಯೆಟ್ನಾಂ ಮುಖಂಡರ ಜತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತುಕತೆ ನಡೆಸಲಿದ್ದಾರೆ. 
SCROLL FOR NEXT