ಮಹಾತ್ಮ ಗಾಂಧಿ 
ವಿದೇಶ

ನಿರೀಕ್ಷೆಗಿಂತ ನಾಲ್ಕು ಪಟ್ಟು ಹೆಚ್ಚಿನ ಮೊತ್ತಕ್ಕೆ ಮಹಾತ್ಮ ಗಾಂಧಿ ಅವರ ಅಪರೂಪದ ಪೆನ್ಸಿಲ್ ಸ್ಕೆಚ್ ಹರಾಜು!

ಮಹಾತ್ಮ ಗಾಂಧಿ ಅವರ ಅಪರೂಪದ ಪೆನ್ಸಿಲ್ ಸ್ಕೆಚ್ ಒಂದು ಲಂಡನ್ ನಲ್ಲಿ 32,500 ಪೌಂಡ್ ಗಳಿಗೆ ಹರಾಜಾಗಿದ್ದು, ನಿರೀಕ್ಷೆಗಿಂತಲೂ ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಬಿಕರಿಯಾಗಿದೆ.

ಲಂಡನ್: ಮಹಾತ್ಮ ಗಾಂಧಿ ಅವರ ಅಪರೂಪದ ಪೆನ್ಸಿಲ್ ಸ್ಕೆಚ್ ಒಂದು ಲಂಡನ್ ನಲ್ಲಿ 32,500 ಪೌಂಡ್ ಗಳಿಗೆ ಹರಾಜಾಗಿದ್ದು, ನಿರೀಕ್ಷೆಗಿಂತಲೂ ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಬಿಕರಿಯಾಗಿದೆ. 
ಪೆನ್ಸಿಲ್ ಸ್ಕೆಚ್ ನೊಂದಿಗೆ ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರಬೋಸ್ ಅವರ ಹಿರಿಯ ಸಹೋದರ ಶರತ್ ಚಂದ್ರ ಬೋಸ್ ಅವರ ಕುಟುಂಬಸ್ಥರಿಗೆ ತಾವೇ ಸ್ವತಃ ಬರೆದಿರುವ ಪತ್ರಗಳ ಸಂಗ್ರಹಗಳನ್ನೂ ಹರಾಜು ಹಾಕಲಾಗಿದ್ದು, ಒಟ್ಟಾರೆ 37,500 ಪೌಂಡ್ ಗಳಿಗೆ ಹರಾಜಾಗಿದೆ. 
"ಗಾಂಧಿ ಅವರು ಸಾಮಾನ್ಯವಾಗಿ ಔಪಚಾರಿಕ ಛಾಯಾಚಿತ್ರಗಳಿಗೆ ಒಪ್ಪುತ್ತಿರಲಿಲ್ಲ. ಆದರೆ 1931 ರಲ್ಲಿ ಲಂಡನ್ ಗೆ ಆಗಮಿಸಿದ್ದ ಗಾಂಧಿ ಅವರು ಏನನ್ನೋ ಬರೆಯುತ್ತಾ ಕುಳಿತಿದ್ದರು. ಆಗ ಜಾನ್ ಹೆನ್ರಿ ಅಮ್ಶಿಯೆಟ್ಜ್ ಅವರು ಈ ಚಿತ್ರವನ್ನು ಬಿಡಿಸಿದ್ದರು ಎಂದು ಹರಾಜು ಹಾಕಿದ ಸಂಸ್ಥೆ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಕಡಿವಾಣ: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ