ವಾಷಿಂಗ್ಟನ್: ಅಮೆರಿಕ ರಚಿಸಿರುವ ಉಗ್ರರ ಸುರಕ್ಷಿತ ಸ್ವರ್ಗ ತಾಣಗಳಾಗಿರುವ ದೇಶ ಮತ್ತು ವಲಯಗಳ ಪಟ್ಟಿಯಲ್ಲಿ ಇದೀಗ ಪಾಕಿಸ್ತಾನವೂ ಸೇರ್ಪಡೆಯಾಗಿದೆ.
ಅಮೆರಿಕ ಸಂಸತ್ತಿನಿಂದ ಅನುಮತಿ ಪಡೆದಿರುವ 'ಭಯೋತ್ಪಾದನೆ ಕುರಿತ ದೇಶಗಳ ವರದಿ" ಎಂಬ ವಾರ್ಷಿಕ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ.
2016ರಲ್ಲಿ ಲಷ್ಕರ್-ಇ-ತೊಯ್ಬಾ ಮತ್ತು ಜೈಷ್-ಇ-ಮೊಹಮ್ಮದ್ ನಂತಹ ಉಗ್ರ ಸಂಘಟನೆಗಳು ಮತ್ತು ಕಾರ್ಯಾಚರಣೆಯಲ್ಲಿ ತೊಡಗಿದ್ದವು ಎಂಬ ಆಪಾದನೆಗಳೊಂದಿಗೆ, ಪಾಕಿಸ್ತಾನ ದೇಶವನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ತೆಹ್ರಿಕ್ ತಾಲಿಬಾನ್ ಪಾಕಿಸ್ತಾನ್ ನಂತಹ ಸಂಘಟನೆಗಳು ಪಾಕಿಸ್ತಾನ ಸೇನೆ ಮತ್ತು ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿವೆ. ಆದರೆ, ಆಫ್ಘಾನಿಸ್ತಾನ ತಾಲಿಬಾನ್ ಅಥವಾ ಹಕ್ಕಾನಿ ಅಥವಾ ಆಫ್ಘಾನಿಸ್ತಾನದಲ್ಲಿನ ಅಮೆರಿಕದ ಹಿತಾಸಕ್ತಿಗಳಿಗೆ ಅಡ್ಡಿಪಡಿಸುವ ಅವುಗಳ ಸಾಮರ್ಥ್ಯವನ್ನು ಮಿತಿಗೊಳಿಸುವ ವಿರುದ್ಧ ಪಾಕಿಸ್ತಾನ ಪ್ರಮುಖ ಕ್ರಮ ಕೈಗೊಂಡಿಲ್ಲ. ಆದರೂ ಆಫ್ಘಾನ್ ನೇತೃತ್ವದ ಶಾಂತಿ ಪ್ರಕ್ರಿಯೆಗಳು ಪ್ರಯತ್ನಗಳನ್ನು ಪಾಕಿಸ್ತಾನ ಬೆಂಬಲಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತದ ಮೇಲೆ ಮಾವೋವಾದಿ ಬಂಡುಕೋರರು ಸೇರಿದಂತೆ, ಪಾಕಿಸ್ತಾನ ಮೂಲದ ಭಯೋತ್ಪಾದಕರ ದಾಳಇ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಗಿನ ದಾಳಿಗಳಿಗೆ ಭಾರತ ಪಾಕಿಸ್ತಾನವನ್ನು ದೂರುವುದೂ ಮುಂದುವರಿದಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.
ಜನವರಿಯಲ್ಲಿ ಪಂಜಾಬ್ ನ ಪಠಾಣ್ ಕೋರ್ಟ್ ನಲ್ಲಿ ಉಗ್ರರು ದಾಳಿಯನ್ನು ಭಾರತ ಎದುರಿಸಿದೆ. ಜೆಇಎಂ ಉಗ್ರರು ದಾಳಿಗೆ ಕಾರಣ ಎಂದು ಭಾರತೀಯ ಆಡಳಿತ ಅಪಾದಿಸಿದೆ. 2016ರಲ್ಲಿ ಭಯೋತ್ಪಾದನಾ ವಿರೋಧಿ ಹೋರಾಟದಲ್ಲಿ ಸಹಭಾಗಿತ್ವವನ್ನು ತೀವ್ರಗೊಳಿಸುವ ಮತ್ತು ಅಮೆರಿಕದೊಂದಿಗೆ ಮಾಹಿತಿ ಹಂಚಿಕೊಳ್ಳುವ ಆಸಕ್ತಿಯನ್ನು ಭಾರತ ತೋರಿದೆ ಎಂದು ಅದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics