ವಿದೇಶ

ಧಾರ್ಮಿಕ ರಾಷ್ಟ್ರೀಯತೆ ಭಾರತವನ್ನು ಚೀನಾದೊಂದಿಗೆ ಯುದ್ಧಕ್ಕೆ ತಳ್ಳುತ್ತದೆ: ಚೀನಾ ಮಾಧ್ಯಮ ಎಚ್ಚರಿಕೆ

Sumana Upadhyaya
ಬೀಜಿಂಗ್: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರೀಯ ವಿರೋಧಿ ಚಳವಳಿಯೊಂದಿಗೆ ಚೀನಾ ವಿರೋಧಿ ಭಾವನೆಗಳು ಭಾರತದಲ್ಲಿ ಬೆಳೆಯುತ್ತಿವೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಲೇಖನದಲ್ಲಿ ಬರೆಯಲಾಗಿದೆ.
1962ರಲ್ಲಿ ಚೀನಾ-ಭಾರತ ಯುದ್ಧ ನಂತರ ಕೆಲವು ಭಾರತೀಯರು ಚೀನಾದೊಂದಿಗೆ ವ್ಯವಹರಿಸುವಾಗ ಶೂನ್ಯ ಮನಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ.ಯುದ್ಧದಿಂದ ಭಾರತದ ಮೇಲೆ ಉಂಟಾದ ದೀರ್ಘಕಾಲದ ನೋವು ಮತ್ತೆ ಒಂದಾಗಲು ಸಾಧ್ಯವಾಗಲಿಲ್ಲ. ಚೀನಾ ಕಾರ್ಯತಂತ್ರದ ಮೇಲೆ ಅನುಮಾನ ಉಂಟುಮಾಡಲು ದಾರಿಮಾಡಿಕೊಟ್ಟಿತು ಎಂದು ಗ್ಲೋಬಲ್ ಟೈಮ್ಸ್ ಲೇಖನದಲ್ಲಿ ಹೇಳಲಾಗಿದೆ.
ಗಡಿ ಯುದ್ಧದ ನಂತರ ಚೀನಾ ವಿರುದ್ಧ ಸೇಡು ತೀರಿಸಬೇಕೆಂದು ಒತ್ತಾಯಿಸುವ ರಾಷ್ಟ್ರೀಯತಾವಾದಿ ಉತ್ಸಾಹವು ಭಾರತದಲ್ಲಿ ಬೆಳೆಯತೊಡಗಿತು. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ರಾಷ್ಟ್ರೀಯವಾದದ ಮನೋಭಾವ ಇನ್ನಷ್ಟು ಹೆಚ್ಚಾಯಿತು. ರಾಜತಂತ್ರ ವಿಷಯ ಬಂದಾಗ ವಿದೇಶಗಳ ಜೊತೆಗಿನ ಸಂಬಂಧದಲ್ಲಿ ಅದರಲ್ಲೂ ಪಾಕಿಸ್ತಾನ ಮತ್ತು ಚೀನಾ ವಿಷಯದಲ್ಲಿ ಕಠಿಣವಾಗಿ ವರ್ತಿಸಲು ಭಾರತ ಒತ್ತಾಯಿಸುತ್ತಿದೆ ಎಂದಿದೆ.
ಈ ಬಾರಿ ದೊಕ್ಲಮ್ ಗಡಿ ವಿವಾದ ಭಾರತದ ಧಾರ್ಮಿಕ ರಾಷ್ಟ್ರೀಯತಾವಾದಿಗಳ ಬೇಡಿಕೆಯನ್ನು ಪೂರೈಸುವ ಚೀನಾವನ್ನು ಗುರಿಯಾಗಿಸುವ ಕ್ರಮವಾಗಿದೆ ಎಂದು ಲೇಖನದಲ್ಲಿ ಪ್ರತಿಪಾದಿಸಿದೆ.
2014ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಮುಸಲ್ಮಾನರ ವಿರುದ್ಧ ಹಿಂಸಾತ್ಮಕ ಗಲಭೆಯನ್ನು ಹತ್ತಿಕ್ಕುವಲ್ಲಿ ಸರ್ಕಾರ ವಿಫಲವಾಗಿದ್ದು, ಧಾರ್ಮಿಕ ರಾಷ್ಟ್ರೀಯತೆ ಹೆಚ್ಚಾದರೆ ಮೋದಿ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಇಂತಹ ಪರಿಸ್ಥಿತಿಗಳು ಭಾರತದ ಸ್ವ ಹಿತಾಸಕ್ತಿಗಳನ್ನು ಅಪಾಯಕ್ಕೆ ತಳ್ಳಲಿದ್ದು, ಭಾರತ ಜಾಗರೂಕವಾಗಿದ್ದು, ಧಾರ್ಮಿಕ ರಾಷ್ಟ್ರೀಯತೆ ಎರಡೂ ದೇಶಗಳ ನಡುವೆ ಯುದ್ಧಕ್ಕೆ ಕೊಂಡೊಯ್ಯುವ ಸಾಧ್ಯತೆಯಿದೆ ಎಂದು ಲೇಖನಲ್ಲಿ ಎಚ್ಚರಿಕೆ ನೀಡಲಾಗಿದೆ.
SCROLL FOR NEXT