ವಿದೇಶ

ಭಯೋತ್ಪಾದನೆ ಬೆಂಬಲಿಸಿದರೆ ಕಠಿಣ ಕ್ರಮ: ಪಾಕ್ ಗೆ ಅಮೆರಿಕ ಎಚ್ಚರಿಕೆ

Lingaraj Badiger
ವಾಷಿಂಗ್ಟನ್: ಅಮೆರಿಕದ ಹಿರಿಯ ಸೆನೆಟರ್ ಜಾನ್ ಮೆಕೇನ್ ಅವರು ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ, ಮಿಲಿಟರಿ ಹಾಗೂ ಆರ್ಥಿಕ ದಂಡನೆ ವಿಧಿಸಲು ತಿದ್ದುಪಡಿ ವಿಧೇಯಕವನ್ನು ಮಂಡಿಸಿದ್ದಾರೆ.
ಪಾಕ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕಾಗಿ ರಾಷ್ಟ್ರೀಯ ಭದ್ರತಾ ಅಧಿಕರಣ ಕಾಯ್ದೆ(ಎನ್ ಡಿಎಎ) 2018ಕ್ಕೆ ತಿದ್ದುಪಡಿ ತರಬೇಕು ಎಂದು ಮೆಕೇನ್ ಅವರು ಒತ್ತಾಯಿಸಿದ್ದಾರೆ. ಅಲ್ಲದೆ ಅಫಘಾನಿಸ್ತಾನದಲ್ಲಿ ದೀರ್ಘಾವಧಿ ಶಾಂತಿ ನೆಲೆಸಬೇಕಾದರೆ ಹಾಗೂ ಅಮೆರಿಕದ ಹಿತಾಸಕ್ತಿಗಳ ಮೇಲೆ ಭಯೋತ್ಪಾದಕ ದಾಳಿಗಳು ನಿಲ್ಲಬೇಕಾದರೆ ಪಾಕಿಸ್ತಾನದ ಮೇಲೆ ಇಂತಹ ಒತ್ತಡ ಹೇರುವುದು ಅನಿವಾರ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಮೆಕೇನ್ ಅವರು ಅಮೆರಿಕ ಸೆನೆಟ್ ನ ಸಶಸ್ತ್ರ ಸೇವೆಗಳ ಸಮಿತಿ ಮತ್ತು ಶಾಸನಾತ್ಮಕ ಕ್ರಮಗಳ ಮುಖ್ಯಸ್ಥರಾಗಿದ್ದು, ಅವರು ಸೂಚಿಸಿದ ತಿದ್ದುಪಡಿಗಳನ್ನು ಕಾಂಗ್ರೆಸ್ ಅಂಗೀಕರಿಸುತ್ತದೆ. 
ಈಗ ಸೂಚಿಸಲಾಗಿರುವ 609ನೇ ತಿದ್ದುಪಡಿಯಲ್ಲಿ ಅಮೆರಿಕ ಮತ್ತು ಅದರ ಮಿತ್ರ ರಾಷ್ಚ್ರಗಳು ಮೂಲ ಹಿತಾಸಕ್ತಿಗಳ ವಿರುದ್ಧ ದಾಳಿ ನಡೆಸುವ ಉಗ್ರರ ಸಾಮರ್ಥ್ಯವನ್ನು ಕುಗ್ಗಿಸುವುದು, ತಡೆಯುವುದು ಮತ್ತು ಹಾಳುಗೆಡುಹುವ ಅಧಿಕಾರ ಹೊಂದಿರುತ್ತದೆ.
SCROLL FOR NEXT