ಅಲೆಕ್ಸಾಂಡರ್ ಪೀಟರ್ ಸಿರ್ಕ್
ಈತ ಡಚ್ ಮೂಲದ ಅಲೆಕ್ಸಾಂಡರ್ ಪೀಟರ್ ಸಿರ್ಕ್ ಕಳೆದ 10 ದಿನಗಳಿಂದ ಚೀನಾದ ಚಂಗ್ಷಾ ಹುವಾಂಗ್ಹುವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೆಳತಿಗಾಗಿ ಕಾದು ಸುಸ್ತಾಗಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಎರಡು ತಿಂಗಳ ಹಿಂದೆ ಆನ್ ಲೈನ್ ನಲ್ಲಿ 26 ವರ್ಷದ ಮಹಿಳೆ ಜಾಂಗ್ ಜತೆ ಪರಿಚಯವಾಗಿದೆ. ನಂತರ ಇಬ್ಬರು ನಿರಂತರವಾಗಿ ಸಂದೇಶಗಳನ್ನು ರವಾನಿಸಿಕೊಂಡಿದ್ದಾರೆ. ಇದು ಹೀಗೆ ಮುಂದುವರೆದಿದೆ. ಒಂದು ದಿನ ಸಿರ್ಕ್ ಜಾಂಗ್ ಗೆ ಸಂದೇಶವೊಂದನ್ನು ಕಳುಹಿಸಿದ್ದು ತಾನು ಚೀನಾಗೆ ಬರುತ್ತಿರುವುದಾಗಿ ತಿಳಿಸಿದ್ದಾನೆ. ಜತೆಗೆ ಟಿಕೇಟ್ ಅನ್ನು ಸಹ ಕಳುಹಿಸಿದ್ದ ಆದರೆ ಜಾಂಗ್ ಸಿರ್ಕ್ ಜೋಕ್ ಮಾಡುತ್ತಿದ್ದಾನೆ ಎಂದು ಭಾವಿಸಿದ್ದಾಳೆ.
ಇನ್ನು ಸಿರ್ಕ್ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿರುವ ಚಿತ್ರಗಳನ್ನು ಕಂಡು ಆಕೆಗೆ ಮನವರಿಕೆಯಾಗಿದೆ. ಸಿರ್ಕ್ ತನ್ನು ಭೇಟಿಯಾಗಲು ನಿಜವಾಗಲು ಬಂದಿದ್ದಾನೆ ಎಂದು. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಸಿರ್ಕ್ ತನಗೆ ವಿಮಾನ ಟಿಕೇಟ್ ಕಳುಹಿಸಿದ್ದು ನಿಜ. ಆದರೆ ಬಳಿಕ ಆತ ನನ್ನು ಸಂಪರ್ಕಿಸಲು ಕರೆ ಮಾಡಿರಲಿಲ್ಲ. ಹೀಗಾಗಿ ನಾನು ಆತ ತಮಾಷೆ ಮಾಡುತ್ತಿರುವುದಾಗಿ ಭಾವಿಸಿದೆ ಎಂದು ಹೇಳಿದ್ದಾಳೆ.
ಸಿರ್ಕ್ ತಮ್ಮ ಸಂಪರ್ಕಿಸಲು ದೂರವಾಣಿ ಕರೆ ಮಾಡಿದ್ದರು ಆದರೆ ನೀವು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದಾಗ ನಾನು ಪ್ಲಾಸ್ಟಿಕ್ ಸರ್ಜರಿಗಾಗಿ ಬೇರೆ ಸಿಟಿಗೆ ಹೋಗಿದ್ದೇ ಹೀಗಾಗಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದೇ ಎಂದು ಜಾಂಗ್ ಹೇಳಿದ್ದಾರೆ.
ಅಸ್ವಸ್ಥನಾಗಿರುವ ಸಿರ್ಕ್ ಗುಣಮುಖರಾದ ಕೂಡಲೇ ಅವರನ್ನು ನಾನು ಭೇಟಿ ಮಾಡುತ್ತೇನೆ ಮತ್ತು ಸಂಬಂಧವನ್ನು ಮುಂದುವರೆಸುತ್ತೇನೆ ಎಂದು ಜಾಂಗ್ ಹೇಳಿದ್ದಾರೆ.