ವಿದೇಶ

ಎನ್ಎಸ್ ಜಿ ಸದಸ್ಯತ್ವ: ರಷ್ಯಾ ಮೂಲಕ ಚೀನಾ ಮನವೊಲಿಕೆಗೆ ಭಾರತ ಯತ್ನ; ನಮ್ಮ ನಿಲುವು ಬದಲಿಲ್ಲ- ಚೀನಾ

Srinivas Rao BV
ಬೀಜಿಂಗ್: ಪ್ರಸಕ್ತ ಎನ್ಎಸ್ ಜಿ ಸದಸ್ಯರ ಸಭೆಯಲ್ಲಿ ಎನ್ಎಸ್ ಜಿ ಸದಸ್ಯತ್ವ ಪಡೆಯಲೇಬೇಕೆಂದು ಪ್ರಯತ್ನಿಸುತ್ತಿರುವ ಭಾರತ ಚೀನಾ ಅಡ್ಡಗಾಲು ಹಾಕದಂತೆ ಭಾರತ ದಾಳ ಉರುಳಿಸಿದೆ. 
ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಬೆಂಬಲಿಸುವಂತೆ ಚೀನಾ ಮನವೊಲಿಕೆಗೆ ಭಾರತ ರಷ್ಯಾವನ್ನು ಬಳಸಿಕೊಳ್ಳುತ್ತಿದ್ದು, ಚೀನಾ ಮನವೊಲಿಕೆ ಮಾಡಲು ರಷ್ಯಾವನ್ನು ಕೋರಿದೆ. ಭಾರತದ ನಡೆಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ರಷ್ಯಾದೊಂದಿಗೆ ಮಾತನಾಡುತ್ತಿದ್ದೇವೆ ಆದರೆ ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ. 
ರಷ್ಯಾದೊಂದಿಗೆ ಭಾರತದ ಸಂಪರ್ಕದಲ್ಲಿದ್ದುಕೊಂಡು ಚೀನಾ ಮನವೊಲಿಕೆಗೆ ಯತ್ನಿಸುತ್ತಿದೆ ಎಂದು ಸುಷ್ಮಾ ಸ್ವರಾಜ್ ಹೇಳಿಕೆ ನೀಡಿದ್ದರು ಈ ಹಿನ್ನೆಲೆಯಲ್ಲಿ ಚೀನಾ ವಿದೇಶಾಂಗ ಇಲಾಖೆ ವಕ್ತಾರರು ಹೇಳಿಕೆ ನೀಡಿದ್ದು, ಎನ್ಎಸ್ ಜಿ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ, ಎನ್.ಪಿ.ಟಿ ಗೆ ಸಹಿ ಹಾಕದ ರಾಷ್ಟ್ರಗಳಿಗೆ ಎನ್ಎಸ್ ಜಿ ಸದಸ್ಯತ್ವ ಪಡೆಯುವುದಕ್ಕೆ ಚೀನಾ ವಿರೋಧಿಸುತ್ತಿದೆ. ಒಂದು ವೇಳೆ ನೀಡುವುದಾದರೆ ಯಾವುದೇ ತಾರತಮ್ಯ ಇಲ್ಲದೇ ಎನ್ ಪಿಟಿಗೆ ಸಹಿ ಹಾಕದ ಎಲ್ಲಾ ರಾಷ್ಟ್ರಗಳಿಗೂ ಎನ್ ಎಸ್ ಜಿ ಸದಸ್ಯತ್ವ ನೀಡುವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕೆಂಬುದು ಚೀನಾ ನಿಲುವಾಗಿದೆ ಎಂದು ಹೇಳಿದ್ದಾರೆ. 
ರಷ್ಯಾ, ಚೀನಾ ಹಾಗೂ ಭಾರತದೊಂದಿಗೆ ಮೈತ್ರಿ ಹೊಂದಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಮನವೊಲಿಕೆಗೆ ಚೀನಾ ಬಗ್ಗಬಹುದು ಎಂಬುದು ಭಾರತದ ಲೆಕ್ಕಾಚಾರವಾಗಿದೆ. 
SCROLL FOR NEXT