ವಿದೇಶ

ಇರಾನ್ ಸಂಸತ್ ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೆಟ್

Lingaraj Badiger
ತೆಹರಾನ್: ಇರಾನ್ ಸಂಸತ್ ಭವನದ ಮೇಲೆ ಮತ್ತು ಕ್ರಾಂತಿಕಾರಿ ಮುಖಂಡ ರುಹೊಲ್ಲಾ ಖೋಮೆನಿ ಅವರ ಸಮಾಧಿ ಮೇಲೆ ಬುಧವಾರ ನಡೆದ ಅವಳಿ ಭಯೋತ್ಪಾದಕ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೆಟ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.
ಇಸ್ಲಾಮಿಕ್ ಸ್ಟೆಟ್ ಉಗ್ರರು ಇರಾನ್ ರಾಜಧಾನಿ ತೆಹರಾನ್ ನಲ್ಲಿರುವ ಸಂಸತ್ ಒಳಗೆ ನುಗ್ಗಿ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಅಲ್ಲದೆ ಸಂಸತ್ ನ ಒಳಗೆ ಹಲವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 
ಇನ್ನು ಆತ್ಮಾಹುತಿ ಬಾಂಬರ್ ಸೇರಿದಂತೆ ನಾಲ್ವರು ಉಗ್ರರು ಖೊಮೇನಿ ಸಮಾಧಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಇರಾನ್‍ನ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಸಮಾಧಿ ಮೇಲೆ ನಡೆದ ದಾಳಿಯಲ್ಲಿ ಐವರಿಗೆ ಗಾಯಗಳಾಗಿದ್ದು, ಒಬ್ಬರು ಹತ್ಯೆಯಾಗಿದ್ದಾರೆ.
ಖೋಮೆನಿ ಅವರ ಸಮಾಧಿ ಮೇಲೆ ದಾಳಿ ನಡೆಸಿದ ಆತ್ಮಾಹುತಿ ಬಾಂಬರ್ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ ಸಮಾಧಿಯಿದ್ದ ಕ್ಷೇತ್ರದ ಬಳಿ ಬಂದ್ ಬಾಂಬ್ ಸ್ಫೋಟ ನಡೆಸಿರುವುದಾಗಿ ಐಎಸ್‍ಎನ್‍ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
SCROLL FOR NEXT