ವಿದೇಶ

ಪಾಕಿಸ್ತಾನದಲ್ಲಿ ಚೀನಾ ಸೇನಾ ನೆಲೆ ನಿರ್ಮಾಣ ಸಾಧ್ಯತೆ: ಅಮೆರಿಕ

Srinivas Rao BV
ವಾಷಿಂಗ್ ಟನ್: ಪಾಕಿಸ್ತಾನ ಚೀನಾಗೆ ಮುಂದಿನ ಸೇನಾ ನೆಲೆ ನಿರ್ಮಾಣದ ಪ್ರದೇಶವಾಗುವ ಸಾಧ್ಯತೆ ಇದೆ ಎಂದು ಅಮೆರಿಕಾದ ಪೆಂಟಗನ್ ವರದಿ ಹೇಳಿದೆ. 
ಚೀನಾ ವಿದೇಶಗಳಲ್ಲಿ ತನ್ನ ಸೇನಾ ನೆಲೆಗಳನ್ನು ವಿಸ್ತರಿಸುತ್ತಿದ್ದು, ಈಗಾಗಲೇ ಆಫ್ರಿಕಾದಲ್ಲಿ ಸೇನಾ ನೆಲೆಯನ್ನು ನಿರ್ಮಿಸಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನದಲ್ಲೂ ಸೇನಾ ನೆಲೆ ನಿರ್ಮಿಸುವ ಸಾಧ್ಯತೆಗಳಿವೆ ಎಂದು ಪೆಂಟಗನ್ 97 ಪುಟಗಳ ವರದಿಯಲ್ಲಿ ತಿಳಿಸಿದೆ. 
2016 ರಲ್ಲಿ ಚೀನಾ ಸೇನೆ ಬೃಹತ್ ಪ್ರಮಾಣದಲ್ಲಿ ಆಧುನೀಕರಣಗೊಂಡಿರುವುದನ್ನು ಗಮನಿಸಿರುವ ಪೆಂಟಗನ್, ಚೀನಾ ಪಾಕಿಸ್ತಾನದಲ್ಲೂ ಸೇನಾ ನೆಲೆ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎಂದು ಊಹಿಸಿದೆ. ಚೀನಾ ಈಗಾಗಲೇ ವಿದೇಶದಲ್ಲಿ ನಿರ್ಮಿಸಿರುವ ಸೇನಾ ನೆಲೆಯಲ್ಲೇ ಅಮೆರಿಕಾದ ಆಯಕಟ್ಟಿನ ಸೇನಾ ನೆಲೆಯೂ ಇದೆ. ಈಗ ಮತ್ತಷ್ಟು ರಾಷ್ಟ್ರಗಳಲ್ಲಿ ಚೀನಾ ತನ್ನ ಸೇನಾ ನೆಲೆಯನ್ನು ಹೊಂದಲು ಸಿದ್ಧತೆ ನಡೆಸುತ್ತಿದೆ.  
ಚೀನಾ ಪಾಕಿಸ್ತಾನದೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದು, ಬಹುಶಃ ಮುಂದಿನ ದಿನಗಳಲ್ಲಿ ಚೀನಾ ಇದನ್ನು ತನ್ನ ಸೇನಾ ನೆಲೆ ನಿರ್ಮಾಣಕ್ಕೆ ಉಪಯೋಗಿಸಿಕೊಳ್ಳಬಹುದು ಎಂದು ಪೆಂಟಗನ್ ವರದಿ ವಿಶ್ಲೇಷಿಸಿದೆ. 
SCROLL FOR NEXT