ಬಂಗೈ: ಸರ್ಕಾರ ಬಂಡಾಯ ಗುಂಪುಗಳೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದ ಕೆಲ ಗಂಟೆಗಳಲ್ಲಿ ಮಧ್ಯ ಆಫ್ರಿಕಾದ ಗಣರಾಜ್ಯದಲ್ಲಿ ಹಿಂಸಾಚಾರ ಭುಗಿಲೆದಿದ್ದು ಹಿಂಸಾಚಾರದಲ್ಲಿ 100 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ರಿಯಾದಲ್ಲಿ ಮಂಗಳವಾರ ಹಿಂಸಾಚಾರ ಭುಗಿಲೆದ್ದಿದ್ದು ರಕ್ತದ ಕೋಡಿ ಹರಿದಿದೆ. ಇದಕ್ಕೂ ಮುನ್ನ 40 ಮಂದಿ ಸಾವನ್ನಪ್ಪಿದ್ದು ಇದೀಗ ಮೃತರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ.