ಟ್ಯಾಂಕರ್ ದುರಂತ 
ವಿದೇಶ

ಪಾಕಿಸ್ತಾನ ಆಯಿಲ್ ಟ್ಯಾಂಕರ್ ಅಗ್ನಿ ದುರಂತ; 148ಕ್ಕೇರಿದ ಸಾವಿನ ಸಂಖ್ಯೆ!

ಪಾಕಿಸ್ತಾನದ ಬಹವಾಲ್ಪುರ ಹೆದ್ದಾರಿಯಲ್ಲಿ ಭಾನುವಾರ ನಡೆದ ಆಯಿಲ್ ಟ್ಯಾಂಕರ್ ಪಲ್ಟಿ ಹಾಗೂ ಅಗ್ನಿ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 148ಕ್ಕೇರಿದ್ದು, ಇನ್ನೂ 50ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಇಸ್ಲಾಮಾಬಾದ್: ಪಾಕಿಸ್ತಾನದ ಬಹವಾಲ್ಪುರ ಹೆದ್ದಾರಿಯಲ್ಲಿ ಭಾನುವಾರ ನಡೆದ ಆಯಿಲ್ ಟ್ಯಾಂಕರ್ ಪಲ್ಟಿ ಹಾಗೂ ಅಗ್ನಿ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 148ಕ್ಕೇರಿದ್ದು, ಇನ್ನೂ 50ಕ್ಕೂ ಹೆಚ್ಚು ಮಂದಿಯ ಸ್ಥಿತಿ  ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಬಹವಲ್ವುರ ಸಮೀಪದ ಹೆದ್ದಾರಿಯಲ್ಲಿ ಈ ಅನಾಹುತ ಸಂಭವಿಸಿದ್ದು, ತೈಲ ಟ್ಯಾಂಕರ್ ಪಲ್ಟಿಯಾಗಿ ಅದರಲ್ಲಿದ್ದ ಇಂಧನ ಸೋರಿಕೆಯಾಗುತ್ತಿತ್ತು. ಈ ವಿಷಯ ತಿಳಿದ ಸ್ಥಳೀಯರು  ಸೋರಿಕೆಯಾಗುತ್ತಿರುವ ಇಂಧನ ತುಂಬಿಕೊಳ್ಳಲು ಟ್ಯಾಂಕರ್ ನ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಈ ವೇಳೆ ಟ್ಯಾಂಕರ್ ಗೆ ಬೆಂಕಿ ತಗುಲಿದ್ದು, ಟ್ಯಾಂಕರ್ ಸ್ಫೋಟಗೊಂಡಿದೆ. ಪರಿಣಾಮ ಅಲ್ಲಿ ನೆರೆದಿದ್ದ ಅಪಾರ ಮಂದಿ  ಛಿದ್ರಗೊಂಡಿದ್ದಾರೆ. ಘಟನಾ ಸ್ಥಳದಲ್ಲೇ ಸುಮಾರು 120ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರೆ, ಆಸ್ಪತ್ರೆ ಸೇರಿದ್ದ ನೂರಾರು ಮಂದಿ ಪೈಕಿ ಇದೀಗ ಮತ್ತೆ 25ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಇದಲ್ಲದೇ ಇನ್ನೂ 50ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.

ಇನ್ನು ಅಫಘಾತಕ್ಕೀಡಾದ ಟ್ಯಾಂಕರ್ ಕರಾಚಿಯಿಂದ ಲಾಹೋರ್ ನತ್ತ ಪ್ರಯಾಣ ಬೆಳೆಸುತ್ತಿತ್ತು. ಈ ವೇಳೆ ವೇಗವಾಗಿ ಬರುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಈ ವೇಳೆ ತೈಲ ಸೋರಿಕೆಯಾಗಿದ್ದು,  ಅದನ್ನು ಸಂಗ್ರಹಿಸಲು ದೌಡಾಯಿಸಿದ ಸ್ಥಳೀಯರು ಸಿಕ್ಕ ಸಿಕ್ಕ ಕ್ಯಾನ್ ಗಳನ್ನು ತಂದು ತೈಲ ಸಂಗ್ರಹಿಸುತ್ತಿದ್ದರು. ಈ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಮಾತ್ರದಲ್ಲಿ ಟ್ಯಾಂಕರ್ ಸ್ಫೋಟಗೊಂಡಿದೆ. ಈ ವೇಳೆ ಅಲ್ಲಿದ್ದ ನೂರಾರು  ಮಂದಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿ ಸಂಪುಟದ 13 ಸಚಿವರಿಗೆ ಕೊಠಡಿ ಹಂಚಿಕೆ; ಖಾತೆ ಬಗ್ಗೆ ಕ್ಯಾತೆ ತೆಗೆದಿದ್ದ ರಾಮಲಿಂಗಾರೆಡ್ಡಿಗೆ ಬಂಪರ್!

INDIA ಸಭೆಯಲ್ಲಿ ಭಾಗವಹಿಸಿರುವ ಮಮತಾಗೆ ಬಿಗ್ ಶಾಕ್: 20 TMC ಸಂಸದರು NDAಗೆ ಬೆಂಬಲ; ಸ್ಪೀಕರ್ ಓಂ ಬಿರ್ಲಾಗೆ ಪತ್ರ!

Oman ಕರಾವಳಿಯಲ್ಲಿ Indian Navy ಕ್ಷಿಪ್ರ ಕಾರ್ಯಾಚರಣೆ: 24 ಭಾರತೀಯ ನಾವಿಕರ ರಕ್ಷಣೆ, Video

93 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಐತಿಹಾಸಿಕ ಗೆಲುವು!

ನಟಿ ಸುಕನ್ಯಾಗೆ ಅಕ್ರಮ ಸಂಬಂಧ; ವೀರಪ್ಪನ್ ಹೇಳಿಕೆ: 10 ಲಕ್ಷ ಪರಿಹಾರ ನೀಡುವಂತೆ Sun Tvಗೆ ಹೈಕೋರ್ಟ್ ನಿರ್ದೇಶನ!

SCROLL FOR NEXT