ಗ್ರೀನ್ ಪಾರ್ಟಿಯ ಸಲಿಂಗಕಾಮಿ ಹಕ್ಕುಗಳ ಕಾರ್ಯಕರ್ತ ವೊಲ್ಕರ್ ಬೆಕ್(ಮಧ್ಯದಲ್ಲಿರುವವರು) ಮತ್ತು ಅವರ ಅನುಯಾಯಿಗಳು ಸಂಭ್ರಮಾಚರಣೆಯಲ್ಲಿ ತೊಡಗಿರುವುದು.
ಬರ್ಲಿನ್: ಜರ್ಮನ್ ಸಂಸತ್ತು ಶುಕ್ರವಾರ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದೆ.
ಸಲಿಂಗ ಅಥವಾ ವಿರುದ್ಧ ಲಿಂಗದ ಎರಡು ವ್ಯಕ್ತಿಗಳು ಜೀವನಕ್ಕೆ ಪ್ರವೇಶಿಸುವುದು ಮದುವೆಯಾಗಿದೆ.ಹೀಗಾಗಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲಾಗಿದೆ ಎಂದು ಜರ್ಮನ್ ನ ಕಾನೂನು ಸಂಹಿತೆಯಲ್ಲಿ ಬದಲಾಯಿಸಲಾಗಿದೆ. ಈ ಮಸೂದೆಯನ್ನು ಎಡಪಂಥೀಯ ಸರ್ಕಾರಗಳು ಬಲವಾಗಿ ಬೆಂಬಲಿಸಿದ್ದವು.
ಈ ಮಸೂದೆಯಿಂದಾಗಿ ಸಲಿಂಗಕಾಮಿ ದಂಪತಿಗಳಿಗೆ ಮಕ್ಕಳನ್ನು ದತ್ತು ಪಡೆಯುವುದು, ಸಂಪೂರ್ಣ ವೈವಾಹಿಕ ಹಕ್ಕುಗಳು ಸಿಗುತ್ತದೆ. ಜರ್ಮನಿ ಸಂಸತ್ತಿನ ಕೆಳಮನೆ ಮಸೂದೆಯನ್ನು 393-226 ಮತಗಳಿಂದ ಅನುಮೋದನೆ ನೀಡಿದೆ.
ಸಂಸತ್ತಿನ ಮೇಲ್ಮನೆ ಮಸೂದೆಗೆ ಈಗಾಗಲೇ ಒಪ್ಪಿಗೆ ನೀಡಿತ್ತು. ಈ ವರ್ಷಾಂತ್ಯದೊಳಗೆ ಮಸೂದೆ ಜಾರಿಗೆ ಬರುವ ನಿರೀಕ್ಷೆಯಿದೆ.