ವಿದೇಶ

ಲಂಡನ್: ಭಾರತೀಯ ಮೂಲದ ಬಾಲಕನ ಐಕ್ಯೂ 162 ಪಾಯಿಂಟ್ಸ್; ಐನ್‏ಸ್ಟೆನ್, ಹಾಕಿಂಗ್ ಗಿಂತ ಹೆಚ್ಚು

Sumana Upadhyaya
ಲಂಡನ್: 'ಮೆನ್ಸಾ ಐಕ್ಯು' ಪರೀಕ್ಷೆಯಲ್ಲಿ 11 ವರ್ಷದ ಭಾರತೀಯ ಮೂಲದ ಬಾಲಕ ಇಂಗ್ಲೆಂಡಿನಲ್ಲಿ ಅತಿ ಹೆಚ್ಚು ಅಂದರೆ 162 ಅಂಕಗಳನ್ನು ಗಳಿಸಿದ್ದಾನೆ. ಇವನು ಪಡೆದ ಅಂಕ ಅತಿ ಬುದ್ದಿಶಾಲಿಗಳಾದ ಅಲ್ಬರ್ಟ್ ಐನ್ ಸ್ಟೈನ್ ಮತ್ತು ಸ್ಟಿಫನ್ ಹಾಕಿಂಗ್ ಅವರು ಪಡೆದ ಅಂಕಗಳಿಗಿಂತ ಎರಡು ಅಂಕಗಳು ಹೆಚ್ಚಾಗಿದೆ. ಈತ ದೇಶದ ಅತಿ ಬುದ್ದಿವಂತ ಮಕ್ಕಳಲ್ಲಿ ಒಬ್ಬ ಎನಸಿಕೊಂಡಿದ್ದಾನೆ.
ದಕ್ಷಿಣ ಇಂಗ್ಲೆಂಡಿನ ರೀಡಿಂಗ್ ಪಟ್ಟಣದ ಅರ್ನವ್ ಶರ್ಮ ಕೆಲ ವಾರಗಳ ಹಿಂದೆ ಯಾವುದೇ ಪೂರ್ವ ತಯಾರಿ ನಡೆಸದೆ ಅತ್ಯಂತ ಕ್ಲಿಷ್ಟಕರ ಪರೀಕ್ಷೆಯನ್ನು ಪಾಸು ಮಾಡಿದ್ದಾನೆ. 
ಮೌಖಿಕ ತಾರ್ಕಿಕ ಸಾಮರ್ಥ್ಯದಲ್ಲಿ ಅತಿ ಉನ್ನತ ಮಟ್ಟಕ್ಕಿಂತ ಶೇಕಡಾ 1ರಷ್ಟು ಅಂಕಗಳು ಈತನಿಗೆ ಪರೀಕ್ಷೆಯಲ್ಲಿ ಸಿಕ್ಕಿದೆ ಎಂದು ದಿ ಇಂಡಿಪೆಂಡೆಂಟ್ ಎಂಬ ಪತ್ರಿಕೆ ವರದಿ ಮಾಡಿದೆ.
ಮೆನ್ಯಾ ಪರೀಕ್ಷೆ ಅತ್ಯಂತ ಕಷ್ಟದ್ದಾಗಿದ್ದು ಅನೇಕ ಮಂದಿ ಅದರಲ್ಲಿ ತೇರ್ಗಡೆ ಹೊಂದುವುದೇ ಇಲ್ಲ ಎನ್ನುತ್ತಾನೆ ಅರ್ನವ್ ಶರ್ಮ. ಈತನಿಗೆ ಪರೀಕ್ಷೆ ಬರೆಯಲು ಎರಡೂವರೆ ಗಂಟೆ ಹಿಡಿಯಿತಂತೆ. ಏಳರಿಂದ ಎಂಟು ಮಂದಿ ಪರೀಕ್ಷೆ ಬರೆದಿದ್ದು ಅದರಲ್ಲಿ ಇಬ್ಬರು ಮಾತ್ರ ಮಕ್ಕಳು ಉಳಿದವರೆಲ್ಲ ವಯಸ್ಕರು.
ಆತ ಪರೀಕ್ಷೆಗಾಗಿ ಏನೂ ಸಿದ್ದತೆ ಮಾಡಿಕೊಂಡಿರಲಿಲ್ಲ. ಹಾಗೆಂದು ಭಯ ಕೂಡ ಆತನಲ್ಲಿರಲಿಲ್ಲ ಎನ್ನುತ್ತಾರೆ ಅರ್ನವ್ ನ ತಾಯಿ ಮೀಶಾ ಧಮಿಜಾ ಶರ್ಮ. 
ಅರ್ನವ್ ಒಂದೂವರೆ ವರ್ಷದವನಿದ್ದಾಗ ಭಾರತಕ್ಕೆ ಬಂದಿದ್ದರಂತೆ. ಆಗ ಅವನನ್ನು ನೋಡಿದ್ದ ಅಜ್ಜಿ ಈತ ಓದಿನಲ್ಲಿ ಮುಂದಿರುತ್ತಾನೆ ಎಂದು ಹೇಳಿದ್ದರಂತೆ ಎನ್ನುತ್ತಾರೆ ಅರ್ನವ್ ತಾಯಿ.
ಗಣಿತದಲ್ಲಿ ಆತ ಮುಂದಿದ್ದಾನೆ ಎಂದು ತಾಯಿಗೆ ಎರಡೂವರೆ ವರ್ಷದ ಪುಟ್ಟ ಬಾಲಕನಾಗಿದ್ದಾಗಲೇ ಅರಿವಿಗೆ ಬಂದಿತ್ತಂತೆ. ಇಂಗ್ಲೆಂಡಿನ ರೀಡಿಂಗ್ ಹೊರವಲಯದಲ್ಲಿರುವ ಕ್ರಾಸ್ ಫೀಲ್ಡ್ ಶಾಲೆಯಲ್ಲಿ ಓದುತ್ತಿದ್ದಾನೆ.
SCROLL FOR NEXT