ಸಂಗ್ರಹ ಚಿತ್ರ 
ವಿದೇಶ

ಟ್ರಂಪ್ ವಲಸೆ ನೀತಿ ಅಂತೂ ಜಾರಿ; ಇರಾನ್ ವಿರೋಧ

ಆರು ಮುಸ್ಲಿಂ ರಾಷ್ಟ್ರಗಳ ಮೇಲಿನ ನಿರಾಶ್ರಿತರು ಮತ್ತು ಪ್ರಯಾಣಿಕರಿಗೆ ನಿಷೇಧ ಹೇರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಸರ್ಕಾರ ಹೊರಡಿಸಿದ್ದ ಆದೇಶ ಜಾರಿಯಾಗಿದೆ.

ವಾಷಿಂಗ್ಟನ್‌: ಆರು ಮುಸ್ಲಿಂ ರಾಷ್ಟ್ರಗಳ ಮೇಲಿನ ನಿರಾಶ್ರಿತರು ಮತ್ತು ಪ್ರಯಾಣಿಕರಿಗೆ ನಿಷೇಧ ಹೇರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್  ಟ್ರಂಪ್‌ ಸರ್ಕಾರ ಹೊರಡಿಸಿದ್ದ ಆದೇಶ ಜಾರಿಯಾಗಿದೆ.

ಸತತ ಐದು ತಿಂಗಳ ಪರ-ವಿರೋಧ ಚರ್ಚೆ ಮತ್ತು ವಾದವಿವಾದಗಳ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಯ ಆರಂಭಿಕ ಹಂತ ಜಾರಿಯಾಗಿದ್ದು, ವಲಸೆ ನಿರ್ಬಂಧ ಜಾರಿಗಿದ್ದ ತಡೆಯನ್ನು  ಅಮೆರಿಕದ ಸುಪ್ರೀಂ ಕೋರ್ಟ್‌ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ವಲಸೆ ನೀತಿ ಅನುಷ್ಠಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಗುರುವಾರ ನಡೆದ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ಅಮೆರಿಕ ಸರ್ಕಾರ ತನ್ನ ವಲಸೆ ನೀತಿಯಲ್ಲಿನ ಹೊಸ ಮಾನದಂಡಗಳನ್ನು ಮನವರಿಕೆ ಮಾಡಿದ್ದು, ಯಾರನ್ನು ಅಥವಾ ಯಾವ ಬಗೆಯ ನಿರಾಶಿತ್ರರನ್ನು ದೇಶದೊಳಗೆ  ಪ್ರವೇಶಿಸಲು ಅನುಮತಿ ನೀಡುತ್ತೇವೆ ಎಂಬ ಅಂಶವನ್ನು ತಿಳಿಸಿಕೊಟ್ಟಿದೆ. ಅದರಂತೆ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್‌, ಸಿರಿಯಾ ಮತ್ತು ಯೆಮೆನ್‌ ನ ನಾಗರಿಕರು 90 ದಿನಗಳ ಕಾಲ, ಇಲ್ಲಿನ ವಲಸಿಗರು 120  ದಿನಗಳ ಕಾಲ ಅಮೆರಿಕ ಪ್ರವೇಶಿಸುವಂತಿಲ್ಲ.

ಆದರೆ, ಸರ್ಕಾರದ ಪರಿಷ್ಕೃತ ನೀತಿಯು ಮತ್ತೆ ನ್ಯಾಯಾಲಯದ ವಾದ-ವಿವಾದಕ್ಕೆ ಕಾರಣವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಅಮೆರಿಕಕ್ಕೆ ಯಾರೆಲ್ಲ ಭೇಟಿ ನೀಡಬಹುದು ಮತ್ತು ಯಾರು ಭೇಟಿ ನೀಡಬಾರದು ಎಂಬ ಹೊಸ  ಮಾನದಂಡವನ್ನು ಸರ್ಕಾರವು ಘೋಷಿಸಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸರ್ಕಾರದ ಮಾನದಂಡದ ಪ್ರಕಾರ, ಅಮೆರಿಕದಲ್ಲಿ ಹತ್ತಿರದ ಸಂಬಂಧಿಕರಿದ್ದರೆ ಅಂಥಹವರನ್ನು ಭೇಟಿಯಾಗಲು ಅವಕಾಶವಿದೆ. ಆದರೆ,  ಅಜ್ಜ-ಅಜ್ಜಿಯಂದಿರು, ಮೊಮ್ಮಕ್ಕಳು, ಅಂಕಲ್‌, ಆಂಟಿ, ಸೋದರ ಸಂಬಂಧಿಗಳು ಮತ್ತು ಭಾವೀ ಪತಿ, ಭಾವೀ ಪತ್ನಿ ಮುಂತಾದವರು ಅಮೆರಿಕದಲ್ಲಿನ ಸಂಬಂಧಿಗಳನ್ನು ನೋಡಲು ಬರುವಂತಿಲ್ಲ. ಸೊಸೆಯಂದಿರು, ಅಳಿಯಂದಿರು  ಮತ್ತು ಮಲಮಕ್ಕಳಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿದೆ.

ಇನ್ನು ಸರ್ಕಾರದ ಈ ಪಟ್ಟಿಗೆ ಅಮೆರಿಕದ ಬಹುತೇಕ ವಕೀಲರು ಆಕ್ರೋಶ ವ್ಯಕ್ತ ಪಡಿಸಿದ್ದು, ಅಧ್ಯಕ್ಷರಾದವರು ಕುಟುಂಬಗಳನ್ನು ಕೂಡಿಸುವ ಕೆಲಸ ಮಾಡಬೇಕೇ ಹೊರತು, ದೂರ ಮಾಡುವುದಲ್ಲ ಎಂದು ನ್ಯಾಷನಲ್‌ ಇರಾನಿಯನ್‌  ಅಮೆರಿಕನ್‌ ಕೌನ್ಸಿಲ್‌ ಹೇಳಿದೆ.

ಅಮೆರಿಕ ವಲಸೆ ನೀತಿಗೆ ಇರಾನ್ ಆಕ್ರೋಶ
ಅತ್ತ ಅಮೆರಿಕ ಸರ್ಕಾರದ ವಲಸೆ ನೀತಿಗೆ ಅಲ್ಲಿನ ವಕೀಲರೇ ಅಸಮಾಧಾನ ವ್ಯಕ್ತಪಡಿಸುತ್ತಿರುವಂತೆಯೇ ಇತ್ತ ಇರಾನ್ ದೇಶ ಕೂಡ ಅಮೆರಿಕ ವಲಸೆ ನೀತಿಗೆ ತನ್ನ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ  ಮಾತನಾಡಿರುವ ಇರಾನ್ ವಿದೇಶಾಂಗ ಸಚಿವ ಮಹಮದ್ ಜಾವೆದ್ ಝರೀಫ್ ಅವರು, ಅಮೆರಿಕದ ನಿರ್ಧಾರ ನಿಜಕ್ಕೂ ಅಪಮಾನಕರ ನಿರ್ಧಾರವಾಗಿದ್ದು, ಇರಾನ್ ಮೂಲದ ಅಜ್ಜ-ಅಜ್ಜಿಯಂದಿರನ್ನು ಗುರಿ ಮಾಡಿಕೊಂಡು ಆದೇಶ  ನೀಡಲಾಗಿದೆ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT