ವಿದೇಶ

ಮುಹಾರ್ಜಿರ್ ಗಳ ಮೇಲೆ ಪಾಕ್ ದೌರ್ಜನ್ಯದ ಬಗ್ಗೆಯೂ ದಯಮಾಡಿ ಧ್ವನಿ ಎತ್ತಿ: ಮೋದಿಗೆ ಎಂಕ್ಯೂಎಂ ಮುಖಂಡ ಅಲ್ತಾಫ್ ಮನವಿ

Srinivas Rao BV
ಲಂಡನ್: ಪ್ರಧಾನಿ ನರೇಂದ್ರ ಮೋದಿ ಬಲೂಚಿಸ್ಥಾನದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುತ್ತಿದ್ದಂತೆಯೇ, ಪಾಕಿಸ್ತಾನದ ಹಲವು ಪ್ರದೇಶಗಳಲ್ಲಿ ದೌರ್ಜನ್ಯಕ್ಕೊಳಗಾಗಿರುವವರೂ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಲು ಪ್ರಾರಂಭಿಸಿದ್ದಾರೆ. ಈ ಸಾಲಿಗೆ ಮುಟ್ಟಾಹಿದಾ ಖ್ವಾಮಿ ಮೂವ್ಮೆಂಟ್ (ಎಂಕ್ಯೂಎಂ) ಹೊಸದಾಗಿ ಸೇರ್ಪಡೆಯಾಗಿದೆ. 
ಕರಾಚಿಯಲ್ಲಿರುವ ಮುಹಾಜಿರ್ಸ್ ಹಕ್ಕುಗಳಿಗಾಗಿ ಮುಟ್ಟಾಹಿದಾ ಖ್ವಾಮಿ ಮೂವ್ಮೆಂಟ್ (ಎಂಕ್ಯೂಎಂ) ಹೊರಾಟ ಮಾಡುತ್ತಿದ್ದು, ಸಂಘಟನೆಯ ನಾಯಕ ಅಲ್ತಾಫ್ ಹುಸೇನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮುಹಾಜಿರ್ಸ್ ಹಕ್ಕುಗಳ ಪರವಾಗಿ ಧ್ವನಿ ಎತ್ತಬೇಕೆಂದು ಮನವಿ ಮಾಡಿದ್ದಾರೆ. ಲಂಡನ್ ನಲ್ಲಿರುವ ಪಾಕಿಸ್ತಾನದ ಸಂಘಟನೆಯ ಮುಖಂಡ ಪ್ರಧಾನಿ ನರೇಂದ್ರ ಮೋದಿ ಅವರು ಬಲೂಚಿಸ್ಥಾನದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮಾತ್ರ ಧ್ವನಿ ಎತ್ತುತ್ತಾರೆ. ಆದರೆ ಶತಮಾನಗಳಿಂದ ಭಾರತದಲ್ಲೇ ಜೀವಿಸಿದ್ದ ಜನರ ಹಕ್ಕುಗಳ ಬಗ್ಗೆ ಮಾತನಾಡುತ್ತಿಲ್ಲ ಎಂದಿದ್ದಾರೆ. 
"ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮ್ಮದೊಂದು ಆಕ್ಷೇಪವಿದೆ. ಬಲೂಚಿಸ್ಥಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಕ್ರೌರ್ಯದ ವಿರುದ್ಧ ಮಾತನಾಡುತ್ತೀರಿ, ಆದರೆ ಭಾರತದಲ್ಲೇ ಶತಮಾನಗಳ ಕಾಲ ಇದ್ದ ನಿಮ್ಮದೇ ಜನರ ( ಮುಹಾಜಿರ್ಸ್) ಮೇಲೆ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯಗಳ ವಿರುದ್ಧ ಯಾಕೆ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
"ಪಾಕಿಸ್ತಾನಕ್ಕೆ ವಲಸೆ ಬಂದು ನಮ್ಮ ಪೂರ್ವಜರು ಬಹಳ ದೊಡ್ಡ ತಪ್ಪು ಮಾಡಿದರು. ಆದರೆ ನಾವೆಲ್ಲರೂ ಇಲ್ಲಿ ಹುಟ್ಟಿದ್ದೇವೆ ಅಷ್ಟೇ. ಆದರೆ ಎಂದಿಗೂ ನಮ್ಮನ್ನು ಪಾಕಿಸ್ತಾನಿಗಳೆಂದು ಸ್ವೀಕರಿಸಿಲ್ಲ. ಪ್ರಧಾನಿಗಳೇ ನೀವು ಉರ್ದು ಮಾತನಾಡುವ ನಿಮ್ಮದೇ ಜನರಾಗಿರುವ ಮುಹಾಜಿರ್ ಗಳ ವಿರುದ್ಧ ಪಾಕಿಸ್ತಾನ ಸೇನೆ, ಸರ್ಕಾರ ನಡೆಸುತ್ತಿರುವ ದಾಳಿಯ ವಿರುದ್ಧ ಧ್ವನಿ ಎತ್ತಬೇಕು ಎಂದು ಅಲ್ತಾಫ್ ಹುಸೇನ್ ಹೇಳಿದ್ದಾರೆ. ಭಾರತ ಮುಹಾಜಿರ್ ಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ವಿಷಯವನ್ನು ಅಂತಾರಾಷ್ಟ್ರೀಯ ಸಮುದಾಯ ಹಾಗೂ ಮಾನವ ಹಕ್ಕುಗಳ ವೇದಿಕೆಯಲ್ಲಿ ಪ್ರಸ್ತಾಪಿಸಬೇಕು ಎಂದು ಎಂಕ್ಯೂಎಂ ಹೇಳಿದೆ. 
SCROLL FOR NEXT