ನ್ಯೂಯಾರ್ಕ್: ತಮ್ಮ ತಾಯಿಯನ್ನು ನ್ಯಾಯಾಧೀಶೆಯಾಗಲು ಭಾರತದಲ್ಲಿ ಬಿಡಲಿಲ್ಲ ಯಾಕೆಂದರೆ ಆಕೆ ಮಹಿಳೆ ಎಂಬ ಕಾರಣಕ್ಕೆ ಎಂದು ವಿಶ್ವಸಂಸ್ಥೆಗೆ ಅಮೆರಿಕಾದ ಶಾಶ್ವತ ಪ್ರತಿನಿಧಿಯಾಗಿರುವ ನಿಕ್ಕಿ ಹ್ಯಾಲೆ ಹೇಳಿದ್ದಾರೆ. ಆದರೆ ಭಾರತದಲ್ಲಿ 1937ರಿಂದ ಮಹಿಳಾ ನ್ಯಾಯಾಧೀಶರು ಇದ್ದಾರೆ.
ವಿದೇಶಿ ಸಂಬಂಧಗಳ ಪರಿಷತ್ತಿನ ಸಭೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಉತ್ತರ ನೀಡಿದ ಅವರು, ಭಾರತದಲ್ಲಿ ಶಿಕ್ಷಣವಂತರ ಪ್ರಮಾಣ ಹೆಚ್ಚಿಲ್ಲದ ಸಂದರ್ಭದಲ್ಲಿ ನನ್ನ ತಾಯಿಗೆ ಕಾನೂನು ಶಾಲೆಗೆ ಹೋಗಿ ಕಲಿಯುವ ಅವಕಾಶ ಸಿಕ್ಕಿತ್ತು. ವಾಸ್ತವವಾಗಿ ಅವರು ಭಾರತದ ಮೊದಲ ಮಹಿಳಾ ನ್ಯಾಯಾಧೀಶೆಯಾಗಬೇಕಾಗಿತ್ತು, ಆದರೆ ಅಂದಿನ ಮಹಿಳೆಯರ ಪರಿಸ್ಥಿತಿಯ ಕಾರಣದಿಂದಾಗಿ ನ್ಯಾಯಪೀಠದಲ್ಲಿ ಕುಳಿತುಕೊಳ್ಳಲು ಅವರಿಗೆ ಅವಕಾಶ ಸಿಗಲಿಲ್ಲ ಎಂದರು.
ಆದರೆ ಅವರ ಮಗಳು ದಕ್ಷಿಣ ಕ್ಯಾಲಿಫೋರ್ನಿಯಾದ ಗವರ್ನರ್ ಮತ್ತು ವಿಶ್ವಸಂಸ್ಥೆಗೆ ಅಮೆರಿಕಾದ ರಾಯಭಾರಿಯಾಗಿದ್ದನ್ನು ನೋಡಲು ಎಷ್ಟು ಖುಷಿಯಾಗುತ್ತದೆ ಎಂದು ನಿಕ್ಕಿ ಹೇಳಿದ್ದಾರೆ.
ನಿಕ್ಕಿ ಹ್ಯಾಲೆಯವರ ತಂದೆ ತಾಯಂದಿರಾದ ಅಜಿತ್ ಸಿಂಗ್ ಮತ್ತು ರಾಜ್ ಕೌರ್ ರಂಧವಾ 1960ರ ದಶಕದಲ್ಲಿ ಭಾರತದಿಂದ ಅಮೆರಿಕಾಕ್ಕೆ ವಲಸೆ ಹೋಗಿದ್ದರು. ಆದರೆ ಅದಕ್ಕೂ ಎರಡು ದಶಕಗಳಿಗೂ ಮುನ್ನ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ತಿರುವಾಂಕೂರಿನಲ್ಲಿ ಅನ್ನಾ ಚಾಂಡಿ ಎಂಬ ಮಹಿಳೆ ನ್ಯಾಯಾಧೀಶೆಯಾಗಿದ್ದರು.
ಸ್ವಾತಂತ್ರ್ಯ ಸಿಕ್ಕಿದ ನಂತರ ಅಣ್ಣಾ ಚಾಂಡಿಯವರನ್ನು 1948ರಲ್ಲಿ ಜಿಲ್ಲಾ ನ್ಯಾಯಾಧೀಶೆಯಾಗಿ ಬಡ್ತಿ ನೀಡಲಾಯಿತು. 1959ರಲ್ಲಿ ಹೈಕೋರ್ಟ್ ನ್ಯಾಯಾಧೀಶೆ ಕೂಡ ಆದರು. ಹ್ಯಾಲಿಯವರ ಪೋಷಕರು ಅಮೆರಿಕಕ್ಕೆ ಹೋಗುವ ಮುನ್ನವೇ ಚಾಂಡಿಯವರನ್ನು ನ್ಯಾಯಪೀಠದಲ್ಲಿ ಕುಳಿತು ತೀರ್ಮಾನ ಕೊಡಲು ಅವಕಾಶ ನೀಡಲಾಗುತ್ತಿತ್ತು.
ವಿಶ್ವಸಂಸ್ಥೆಯ ರಾಯಭಾರಿ ಹುದ್ದೆ ಅಮೆರಿಕಾದಲ್ಲಿ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿದ್ದು, ಹ್ಯಾಲಿಯವರು ಆ ಸ್ಥಾನಕ್ಕೆ ಏರಿದ ಮೊದಲ ಭಾರತೀಯ ಮೂಲದ ಅಮೆರಿಕನ್ನರಾಗಿದ್ದಾರೆ. ರಿಪಬ್ಲಿಕನ್ ಪಕ್ಷದವರಾಗಿರುವ ಹ್ಯಾಲೆ ದಕ್ಷಿಣ ಕ್ಯಾಲೊರಿನಾದ ಗವರ್ನರ್ ಆಗಿ 2010ರಲ್ಲಿ ಆಯ್ಕೆಯಾಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos