ವಿದೇಶ

ಕೀಸ್ಟೋನ್ ತೈಲ ಪೈಪ್‌ಲೈನ್‌ಗೆ ಭಾರತ, ಇಟಲಿಯ ಸ್ಟೀಲ್ ಬೇಡ: ಅಮೆರಿಕ ಸೆನೆಟರ್ ಗಳ ಆಗ್ರಹ

Vishwanath S
ವಾಷಿಂಗ್ಟನ್: ಅಮೆರಿಕದ ವಿವಾದಿತ ಬಹು ಬಿಲಿಯನ್ ವೆಚ್ಚದ ಕೀಸ್ಟೋನ್ ತೈಲ ಪೈಪ್ ಲೈನ್ ಯೋಜನೆಗೆ ಅಮೆರಿಕನ್ನರನ್ನು ಜತೆಗೆ ಮೇಡ್ ಇನ್ ಅಮೆರಿಕ ಉತ್ಪನ್ನಗಳು ಮತ್ತು ಉಪಕರಣಗಳನ್ನು ಬಳಸುವಂತೆ ಡೆಮಾಕ್ರಟಿಕ್ ಸೆನೆಟರ್ ಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಆಗ್ರಹಿಸಿದ್ದಾರೆ. 
ಕೆನಡಿಯನ್ ಕಂಪನಿ ಭಾರತ ಮತ್ತು ಇಟಲಿ ತಯಾರಿಸಿರುವ ಸ್ಟೀಲ್ ಅನ್ನು ಕೀ ಸ್ಟೋನ್ ತೈಲ ಪೈಪ್ ಲೈನ್ ಗೆ ಬಳಸಲಿದ್ದು ಇದನ್ನು ತಡೆಯಬೇಕಿದೆ ಎಂದು ಒಂಬತ್ತು ಡೆಮಾಕ್ರಟಿಕ್ ಸೆನೆಟರ್ ಗಳು ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರ ಬರೆದಿದ್ದಾರೆ. 
ಪರಿಸರ ನಾಶವಾಗುತ್ತದೆ ಎಂಬ ಕಾರಣಕ್ಕೆ ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಈ ಯೋಜನೆಗೆ ಅನುಮತಿ ನಿರಾಕರಿಸಿದ್ದು ನೀವು ಕೆನಡಿಯನ್ ಕೀಸ್ಟೋನ್ ತೈಲ ಪೈಪ್ಲೈನ್ ಯೋಜನೆಗೆ ಅನುಮತಿ ನೀಡುವುದಾದರೆ ಇದಕ್ಕೆ ಮೇಡ್ ಇನ್ ಅಮೆರಿಕ ಸ್ಟೀಲ್ ಅನ್ನು ಬಳಸುವಂತೆ ಮನವಿ ಮಾಡಿದ್ದಾರೆ. 
ಕೆನಡಿಯನ್ ಸಂಸ್ಥೆ ಮೇಡ್ ಇನ್ ಭಾರತ ಮತ್ತು ಇಟಲಿಯ ಸ್ಟೀಲ್ ಗಳನ್ನು ಬಳಸಲಿದ್ದು ಈ ಯೋಜನೆ ಮುಂದುವರೆದರೆ ಮೊದಲು ಅಮೆರಿಕನ್ನರಿಗೆ ಉದ್ಯೋಗವಕಾಶ ಎಂದು ಹೇಳುತ್ತಿರುವ ನೀವೇ ಇದನ್ನು ವಿರೋಧಿಸಿದಂತಾಗುತ್ತದೆ ಎಂದು ಸೆನೆಟರ್ ಗಳಾದ ಕ್ರಿಸ್ ವಾನ್ ಹೊಲೇನ್ ಮತ್ತು ಟಮ್ಮಿ ಡಕ್ವರ್ತ್ ನೇತೃತ್ವದಲ್ಲಿ 9 ಸೆನೆಟರ್ ಗಳು ಟ್ರಂಪ್ ಗೆ ಪತ್ರ ಬರೆದಿದ್ದಾರೆ. 
SCROLL FOR NEXT