ವಿದೇಶ

ನಾಳೆಯಿಂದ ಕರಾಚಿ-ಮುಂಬೈ ವಿಮಾನ ಹಾರಾಟ ರದ್ದು: ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್

Sumana Upadhyaya
ಲಾಹೋರ್: ವಾಣಿಜ್ಯ ಪರಿಗಣನೆ ಹಿನ್ನೆಲೆಯಲ್ಲಿ ಕರಾಚಿ ಮತ್ತು ಮುಂಬೈ ನಡುವೆ ವಿಮಾನ ಸಂಚಾರವನ್ನು ನಾಳೆಯಿಂದ ರದ್ದುಗೊಳಿಸಲಾಗಿದೆ ಎಂದು ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ(ಪಿಐಎ) ತಿಳಿಸಿದೆ.
ಪಿಐಎ, ಕರಾಚಿ ಮತ್ತು ಮುಂಬೈ ನಡುವೆ ವಾರದಲ್ಲಿ ಎರಡು ದಿನ ಸೋಮವಾರ ಮತ್ತು ಗುರುವಾರ ವಿಮಾನ ಸಂಚಾರ ವ್ಯವಸ್ಥೆಯನ್ನು ಹೊಂದಿತ್ತು.
ಆದರೂ ಪಿಐಎಯ ಲಾಹೊರ್-ದೆಹಲಿ ವಿಮಾನ ಕಾರ್ಯಾಚರಣೆ ಮುಂದುವರಿಯಲಿದೆ. ಈ ಮಾರ್ಗದಲ್ಲಿ ಅಷ್ಟೊಂದು ಸಂಚಾರ ದಟ್ಟಣೆಯಿಲ್ಲ ಎಂದು ಅಧಿಕಾರಿಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಏಪ್ರಿಲ್ 8 ರ ನಂತರ ಕರಾಚಿಯಿಂದ ಮುಂಬೈಗೆ ಮತ್ತು ಮುಂಬೈಯಿಂದ ಕರಾಚಿಗೆ ವಿಮಾನ ಸಂಚಾರವಿರುವುದಿಲ್ಲ. ಪಿಐಎ ಟಿಕೆಟ್ ಬುಕ್ಕಿಂಗ್ ನಿಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಿರ್ಧಾರ ಸಂಪೂರ್ಣ ವಾಣಿಜ್ಯೀಕರಣವಾಗಿದೆ ಎಂದು ಪಿಐಎ ವಕ್ತಾರ ದನ್ಯಲ್ ಗಿಲ್ಲನಿ ತಿಳಿಸಿದ್ದಾರೆ.
ಆದರೆ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದ್ದು ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಭಾರತೀಯ ಯೋಧರ ಹತ್ಯೆ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
SCROLL FOR NEXT