ವಿದೇಶ

ಪ್ರತಿಷ್ಠಿತ ವೈಟ್ಲಿ ಪ್ರಶಸ್ತಿಗೆ ಭಾಜನರಾದ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ

Shilpa D
ಲಂಡನ್ : ಪ್ರಾಣಿ ಮತ್ತು ಪಕ್ಷಿ ಸಂರಕ್ಷಣಾ  ಕ್ಷೇತ್ರದ ವಿಶಿಷ್ಟ ಸೇವೆಗೆ ಕೊಡುವ ಗ್ರೀನ್ ಆಸ್ಕರ್ ಖ್ಯಾತಿಯ ಇಂಗ್ಲೆಂಡ್ ನ ಪ್ರತಿಷ್ಠಿತ ವೈಟ್ಲಿ ಪ್ರಶಸ್ತಿಗೆ ಕರ್ನಾಟಕದಲ್ಲಿ ಹುಲಿ ಕಾರಿಡಾರ್‌ ಸಂರಕ್ಷಿಸುತ್ತಿರುವ ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಅವರು ಭಾಜನರಾಗಿದ್ದಾರೆ.
ಗ್ರೇಟರ್‌ ಅಡ್ಜುಟೆಂಟ್‌ ತಳಿಯ ಕೊಕ್ಕರೆ (ಹರ್ಗಿಲಾ) ಸಂರಕ್ಷಿಸುತ್ತಿರುವ ಅಸ್ಸಾಂನ ಪೂರ್ಣಿಮಾ ಬರ್ಮನ್‌ ಅವರಿಗೆ ಗ್ರೀನ್‌ ಆಸ್ಕರ್‌ ಎಂದೇ ಖ್ಯಾತಿ ಪಡೆದಿರುವ ಪ್ರತಿಷ್ಠಿತ ವೈಟ್ಲಿ ಪ್ರಶಸ್ತಿ’ ಲಭಿಸಿದೆ.ವಿವಿಧ ದೇಶಗಳಿಂದ ಬಂದ 166 ಅರ್ಜಿಗಳಲ್ಲಿ, ಭಾರತದ ಇವರಿಬ್ಬರು ಸೇರಿದಂತೆ ಒಟ್ಟು 8 ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 
ಪ್ರಶಸ್ತಿಯು  ರು.29ಲಕ್ಷ ನಗದು ಪುರಸ್ಕಾರ ಒಳಗೊಂಡಿದೆ. ಎಲೆಕ್ಟ್ರಾನಿಕ್‌ ಎಂಜಿನಿಯರ್‌ ಆಗಿದ್ದ ಸಂಜಯ್‌, ವನ್ಯಜೀವಿ ಸಂರಕ್ಷಣೆಗಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.
SCROLL FOR NEXT