ವಿದೇಶ

ವಿಕಿಲೀಕ್ಸ್‌ ಸ್ಥಾಪಕ ಅಸಾಂಜೆ ಅತ್ಯಾಚಾರ ಪ್ರಕರಣದ ತನಿಖೆ ಕೈಬಿಟ್ಟ ಸ್ವೀಡನ್‌ ಪ್ರಾಸಿಕ್ಯೂಟರ್

Lingaraj Badiger
ಸ್ಟಾಕ್ಹೋಮ್: ಸುಮಾರು ಏಳು ವರ್ಷಗಳ ನಂತರ ವಿಕಿಲೀಕ್ಸ್‌ ಸ್ಥಾಪಕ ಜೂಲಿಯನ್‌ ಅಸಾಂಜೆ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯನ್ನು ತಾನು ಕೈಬಿಟ್ಟಿರುವುದಾಗಿ ಸ್ವೀಡನ್‌ ನ ಉನ್ನತ ಪ್ರಾಸಿಕ್ಯೂಟರ್‌ ಶುಕ್ರವಾರ ಹೇಳಿದ್ದಾರೆ.
ಅಸಾಂಜೆ ವಿರುದ್ಧದ ಅತ್ಯಾಚಾರ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಮುಂದುವರಿಸದಿರಲು ನಿರ್ಧರಿಸಿರುವುದಾಗಿ ಸ್ವೀಡನ್‌ನ ಚೀಫ್ ಪ್ರಾಸಿಕ್ಯೂಟರ್‌ ಮ್ಯಾರಿಯನ್‌ ನೈ ಅವರ ಕಾರ್ಯಾಲಯ ಇಂದು ಪ್ರಕಟಣೆಯಲ್ಲಿ ತಿಳಿಸಿದೆ. 
ಕಳೆದ ಏಳು ವರ್ಷಗಳಿಂದ ಚಾಲ್ತಿಯಲ್ಲಿರುವ ಅಸಾಂಜೆ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯ ಕುರಿತಾಗಿ ಅಧಿಕಾರಿಗಳು ಮಾತನಾಡಲಿದ್ದಾರೆ ಎಂದು ಪ್ರಾಸಿಕ್ಯೂಟರ್‌ ಕಾರ್ಯಾಲಯ ಹೇಳಿದೆ. ಆದರೆ ಆ ಬಗ್ಗೆ ಹೆಚ್ಚಿನ ವಿವರಗಳನ್ನು ಅದು ನೀಡಿಲ್ಲ. 
ಯುರೋಪ್‌ ನ ಅರೆಸ್ಟ್‌ ವಾರಂಟನ್ನು ಕೈಬಿಡುವಂತೆ ಸ್ವೀಡನ್‌ ಗೆ ಅಸಾಂಜೆ ವಕೀಲರು ಮನವಿ ಮಾಡಿಕೊಂಡಿರುವುದನ್ನು ಅನುಸರಿಸಿ ಸ್ವೀಡನ್‌ ಪ್ರಾಸಿಕ್ಯೂಟರ್‌ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. 
SCROLL FOR NEXT