ಸ್ಫೋಟದ ನಂತರ ಶಸ್ತ್ರಧಾರಿ ಪೊಲೀಸರಿಂದ ಕಾವಲು 
ವಿದೇಶ

ಮ್ಯಾಂಚೆಸ್ಟರ್ ದಾಳಿ: ಬ್ರಿಟನ್ ಪೊಲೀಸರಿಂದ 23 ವರ್ಷದ ಯುವಕನ ಬಂಧನ

22 ಮಂದಿಯನ್ನು ಬಲಿ ಪಡೆದ ಮ್ಯಾಂಚೆಸ್ಟರ್​ನ ಅರೇನಾ ಸ್ಟೇಡಿಯಂನ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ...

ಮ್ಯಾಂಚೆಸ್ಟರ್: 22 ಮಂದಿಯನ್ನು ಬಲಿ ಪಡೆದ ಮ್ಯಾಂಚೆಸ್ಟರ್​ನ ಅರೇನಾ ಸ್ಟೇಡಿಯಂನ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ಯುವಕನನ್ನು ಬಂಧಿಸಿರುವುದಾಗಿ ಮಂಗಳವಾರ ಬ್ರಿಟನ್ ಪೊಲೀಸರು ತಿಳಿಸಿದ್ದಾರೆ.
ಕಳೆದ ರಾತ್ರಿ ಮ್ಯಾಂಚೆಸ್ಟರ್​ನ ಅರೇನಾ ಬಾಂಬ್ ದಾಳಿ ಪ್ರಕರಣದ ತನಿಖೆಯ ಭಾಗವಾಗಿ ನಾವು 23 ವರ್ಷದ ಯುವಕನನ್ನು ಬಂಧಿಸಿದ್ದೇವೆ ಎಂದು ದಕ್ಷಿಣ ಮ್ಯಾಂಚೆಸ್ಚರ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರೇನಾ ಸ್ಟೇಡಿಯಂನ ಉಗ್ರರು ಬಾಂಬ್ ಸ್ಫೋಟಿಸಿದ ಪರಿಣಾಮ ಮಕ್ಕಳು, ಮಹಿಳೆಯರು ಸೇರಿದಂತೆ ಒಟ್ಟು 22 ಮಂದಿ ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಕಳೆದ 12 ವರ್ಷಗಳಲ್ಲಿ ನಡೆದಿರುವ ಅತಿ ಭೀಕರ ಸ್ಫೋಟ ಇದಾಗಿದೆ.
ಸೋಮವಾರ ರಾತ್ರಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಯುವ ಅಭಿಮಾನಿಗಳೇ ಭಾಗವಹಿಸಿದ್ದರು. ಸ್ಫೋಟ ನಡೆದ ಕೂಡಲೇ ಸ್ಟೇಡಿಯಂ ನಿಂದ ಹೆದರಿ ದಿಕ್ಕಾಪಾಲಾಗಿ ಓಡಿದ್ದರು.
ನನ್ನ ಕತ್ತಿಗೆ ಬಿಸಿ ತಾಕಿತು, ನಾನು ಅಲ್ಲಿ ತಿರುಗಿ ನೋಡಿದಾಗಿ ಎಲ್ಲೆಂದರಲ್ಲಿ ಮನುಷ್ಯರ ಶವಗಳು ಬಿದ್ದಿದ್ದವು ಎಂದು ತಮ್ಮ 17 ವರ್ಷದ ಮೊಮ್ಮಗಳಿಗಾಗಿ ಕಾಯುತ್ತಿದ್ದ ಪ್ರತ್ಯಕ್ಷದರ್ಶಿ ಎಲೆನ್ ಸೆಮಿನೋ ಹೇಳಿದ್ದಾರೆ. 
ಸುಮಾರು 21 ಸಾವಿರ ಮಂದಿ ಕೂರಲು ಈ ಸ್ಟೇಡಿಯಂನಲ್ಲಿ ಅವಕಾಶವಿದೆ. ನಾವು ಕ್ರೀಡಾಂಗಣದಿಂದ ಹೊರಗೆ ಬರುತ್ತಿದ್ದ ಸಂದರ್ಭದಲ್ಲಿ ಭಾರೀ ಸ್ಪೋಟದ ಸದ್ದು ಕೇಳಿಸಿತು. ಅದರ ಬೆನ್ನಲ್ಲೇ ಜನರು ಭಯಭೀತರಾಗಿ ಓಡುತ್ತಿದ್ದರು ಮತ್ತು ಗಾಯಗೊಂಡವರ ನರಳಾಟ ಕೇಳಿ ಬರುತ್ತಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸ್ಫೋಟದ ರೂವಾರಿ ಆತ್ಮಹತ್ಯಾ ಬಾಂಬರ್ ಕೂಡ ಮೃತಪಟ್ಟಿದ್ದಾನೆ. ಭಯೋತ್ಪಾದಕ ಕೃತ್ಯಕ್ಕೆ ಇಸೀಸ್ ಉಗ್ರ ಸಂಘಟನೆ ಸೇರಿದಂತೆ ಯಾವುದೇ  ಉಗ್ರ ಸಂಘಟನೆ ಹೊಣೆ ಹೊತ್ತಿಲ್ಲ.
ಸ್ಥಳಕ್ಕೆ ಬಂದ ಆಂಬುಲೆನ್ಸ್ ಹಾಗೂ ಬಾಂಬ್ ನಿಷ್ಕ್ರಿಯ ದಳ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿವೆ, ಗಾಯಕಿ ಅರಿಯಾನಾ ಗ್ರಾಂಡೆ ಅವರು ಸುರಕ್ಷಿತವಾಗಿದ್ದಾರೆ. 
ಬ್ರಿಟನ್ ಪ್ರಧಾನಿ ತೆರೇಸಾ ಮೇ ಉಗ್ರರ ದುಷ್ಕೃತ್ಯವನ್ನು ಖಂಡಿಸಿದ್ದು, ತುರ್ತು ಸಭೆಗೆ ಕರೆ ನೀಡಿದ್ದಾರೆ. ಜತೆಗೆ ತಮ್ಮ ಪಕ್ಷದ ಚುನಾವಣಾ ಪ್ರಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT