ಕಾಬೂಲ್(ಆಫ್ಗಾನಿಸ್ತಾನ್): ಪಾಕಿಸ್ತಾನದ ಪೇಶಾವರ್ ನಗರದಲ್ಲಿ ಶಾಂತಿಧೂತ ಹಿಝ್ಬ್-ಇ-ಇಸ್ಲಾಮಿ ಮುಖಂಡ ಹಾಜಿ ಸಲಾಂರನ್ನು ಭಯೋತ್ಪಾದಕರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಮಾಜಿ ಕಾರ್ಯದರ್ಶಿ ಹಾಜಿ ಸಲಾಂ ಅವರು ಪಾರ್ಥನೆ ಸಲ್ಲಿಸುತ್ತಿದ್ದ ವೇಳೆ ಶಸ್ತ್ರಾಸ್ತ್ರಧಾರಿಗಳ ತಂಡ ಅವರ ಮೇಲೆ ಗುಂಡಿನ ಮಳೆಗೇರೆದಿದೆ. ಗುಂಡಿನ ದಾಳಿಯಲ್ಲಿ ಹಾಜಿ ಸಲಾಂ ಅವರು ಮೃತಪಟ್ಟಿರುವುದಾಗಿ ಹಿಝ್ಬ್-ಇ-ಇಸ್ಲಾಮಿ ಸಂಘಟನೆಯ ವಕ್ತಾರ ನದೀರ್ ಅಫ್ಗಾನ್ ಹೇಳಿದ್ದಾರೆ.
ಹಾಜಿ ಸಲಾಂ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು ಇಲ್ಲಿಯವರೆಗೂ ತಾಲಿಬಾನ್ ಉಗ್ರ ಸಂಘಟನೆ ಸೇರಿದಂತೆ ಯಾವುದೇ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ.