ವಿದೇಶ

ಕೆಲ ಹೊತ್ತು ನಿಷ್ಕ್ರಿಯಗೊಂಡ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಟ್ವಿಟ್ಟರ್ ಖಾತೆ

Sumana Upadhyaya
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆ ನಿನ್ನೆ ಸಾಯಂಕಾಲ ಕಣ್ಮರೆಯಾಗಿತ್ತು. ಟ್ವಿಟ್ಟರ್ ಕಂಪೆನಿಯ ನೌಕರರೊಬ್ಬರ ತಪ್ಪಿನಿಂದಾಗಿ ಈ ರೀತಿ ಆಗಿದೆ ಎಂದು ಸಾಮಾಜಿಮಾಧ್ಯಮ ಕಂಪೆನಿ ಆರೋಪಿಸಿದೆ.
ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಪುಟಕ್ಕೆ ನಿನ್ನೆ ಸಾಯಂಕಾಲ 7 ಗಂಟೆ ಸುಮಾರಿಗೆ ಲಾಗಿನ್ ಆದವರಿಗೆ ಸಾರಿ, ಈ ಪುಟ ಲಭ್ಯವಿಲ್ಲ ಎಂಬ ಸಂದೇಶ ಬಂತು. ಇದಕ್ಕೂ ಮುನ್ನ ಟ್ವಿಟ್ಟರ್ ನ ನೌಕರರೊಬ್ಬರ ತಪ್ಪಿನಿಂದಾಗಿ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಖಾತೆಯನ್ನು ಅಪ್ರಜ್ಞಾಪೂರ್ವಕವಾಗಿ ನಿಷ್ಕ್ರಿಯಗೊಳಿಸಲಾಯಿತು ಎಂದು ಟ್ವಿಟ್ಟರ್ ನ ಅಧಿಕೃತ ಹೇಳಿಕೆ ತಿಳಿಸಿದೆ.
ಈ ಬಗ್ಗೆ ನಾವು ತನಿಖೆ ನಡೆಸಲಿದ್ದು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಯಾವುದೇ ವಿಷಯಗಳ ಕುರಿತು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹೊರಹಾಕುವ ಡೊನಾಲ್ಡ್ ಟ್ರಂಪ್ ಅವರಿಗೆ ಟ್ವಿಟ್ಟರ್ ನಲ್ಲಿ 41.7 ದಶಲಕ್ಷ ಅನುಯಾಯಿಗಳಿದ್ದಾರೆ. ಟ್ವಿಟ್ಟರ್ ನಲ್ಲಿ ಹಲವು ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ, ಕಮೆಂಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. 
SCROLL FOR NEXT