ವಿದೇಶ

ಜಗತ್ತಿನಾದ್ಯಂತ ವಾಟ್ಸ್ ಅಪ್ ಮೆಸೆಂಜರ್ ಸೇವೆ ಸ್ಥಗಿತ!

Raghavendra Adiga
ವಾಷಿಂಗ್ ಟನ್: ಜನಪ್ರಿಯ ಮೆಸೇಜ್ ಆಪ್ ವಾಟ್ಸ್ ಅಪ್ ಕೈಕೊಟ್ಟ ಕಾರಣ ಜಗತ್ತಿನಾದ್ಯಂತ ಜನ ಚಿಂತಾಕ್ರಾಂತರಾಗಿದ್ದಾರೆ. ಭಾರತ, ಸಿಂಗಪೂರ್, ವಿಯೆಟ್ನಾಂ, ಇರಾಕ್ ಮತ್ತು ಯೂರೋಪಿನಾದ್ಯಂತದ ಜನರು ವಾಟ್ಸ್ ಅಪ್ ಮೆಸೆಂಜರ್ ಪ್ರವೇಶಿಸಲಾಗದೆ ತೊಂದರೆಗೀಡಾಗಿದ್ದಾರೆ ಎಂದು ವರದಿಯಾಗಿದೆ.
ವಾಟ್ಸ್ ಅಪ್ ನ ಈ ಸಮಸ್ಯೆಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಜಗತ್ತಿನಾದ್ಯಂತ ಹಬ್ಬಿರುವ ವದಂತಿಯಂತೆ ಟ್ವಿಟ್ಟರ್ ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿದೆ. ವಾಟ್ಸ್ ಅಪ್ ಏಕೆ ತೊಂದರೆಯಲ್ಲಿದೆ ಎಂದು ತಿಳಿಯಲು ಟ್ವಿಟ್ಟರ್ ಗೆ ಬಂದೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಬರೆದಿದ್ದಾರೆ. 
ಬಾರತದಲ್ಲಿ ಸಹ ವಾಟ್ಸ್ ಅಪ್ ಕೆಲಸ ಮಾಡುತ್ತಿಲ್ಲ್ ಅದಕ್ಕಾಗಿ ಓರ್ವ ವ್ಯಕ್ತಿ ತಮಾಷೆಯಾಗಿ ಹೀಗೆಂದು ಪ್ರತಿಕ್ರಯಿಸಿದ್ದಾರೆ-"ಭಾರತದಲ್ಲಿ ಒಂದು ಸಂದೇಶವನ್ನು ಹತ್ತು ಮಂದಿಗೆ ಕಳಿಸಲು ತೊಂದಸ್ರೆಯಾಗಿರುವ ಕಾರಣ ಇದಾಗಲೇ 500 ಮಂದಿ ಸತ್ತಿದ್ದಾರೆ!"
 2009 ರಲ್ಲಿ ಪ್ರಾರಂಭವಾದ ವಾಟ್ಸ್ ಅಪ್ ಆನ್ ಲೈನ್ ಮೆಸೇಜಿಂಗ್ ಮೂಲಕ ಜಾಗತಿಕವಾಗಿ ಖ್ಯಾತಿ ಗಳಿಸಿದೆ. 2014 ರಲ್ಲಿ ಪ್ರಖ್ಯಾತ ಸಾಮಾಜಿಕ ತಾಣ ಫೇಸ್ ಬುಕ್, ವಾಟ್ಸ್ ಅಪ್ ನ್ನು 19.3 ಬಿಲಿಯನ್ ಅಮೆರಿಕನ್ ಡಾಲರ್ ಗೆ ಖರೀದಿಸಿತ್ತು.
SCROLL FOR NEXT