ಸಂಗ್ರಹ ಚಿತ್ರ 
ವಿದೇಶ

ಕಾಬುಲ್ ಟಿವಿ ಸ್ಟೇಷನ್'ಗೆ ನುಗ್ಗಿದ ಉಗ್ರರು: ಆತ್ಮಾಹುತಿ ದಾಳಿ

ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿರುವ ಟಿವಿ ಸ್ಟೇಷನ್ ಒಳ ನುಗ್ಗಿರುವ ಉಗ್ರರ ಗುಂಪೊಂದು ಆತ್ಮಾಹುತಿ ದಾಳಿ ನಡೆಸಿದ್ದಾರೆಂದು ಮಂಗಳವಾರ ತಿಳಿದುಬಂದಿದೆ...

ಕಾಬುಲ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿರುವ ಟಿವಿ ಸ್ಟೇಷನ್ ಒಳ ನುಗ್ಗಿರುವ ಉಗ್ರರ ಗುಂಪೊಂದು ಆತ್ಮಾಹುತಿ ದಾಳಿ ನಡೆಸಿದ್ದಾರೆಂದು ಮಂಗಳವಾರ ತಿಳಿದುಬಂದಿದೆ. 
ಕಾಬುಲ್ ನಲ್ಲಿರುವ ಶಂಶದ್ ಟಿವಿ ಸ್ಟೇಷನ್'ಗೆ 2-3 ಉಗ್ರರಿದ್ದ ಗುಂಪೊಂದು ನುಗ್ಗಿದ್ದು, ಆತ್ಮಾಹುತಿ ದಾಳಿ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ. 
ಇಂದು ಬೆಳಿಗ್ಗೆ ಟಿವಿ ಸ್ಟೇಷನ್ ಗೆ ನುಗ್ಗಿದ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದಾರೆಂದು ತಿಳಿದುಬಂದಿದೆ. 
ಮೂವರು ಉಗ್ರರು ಟಿವಿ ಸ್ಟೇಷನ್ ಒಳ ನುಗ್ಗುತ್ತಿದ್ದುದ್ದನ್ನು ಭದ್ರತಾ ಕ್ಯಾಮೆರಾಗಳಲ್ಲಿ ನೋಡಿದೆ. ಟಿವಿ ಸ್ಟೇಷನ್ ಬಳಿ ಬರುತ್ತಿದ್ದಂತೆಯೇ ಉಗ್ರರು ಮೊದಲು ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದರು, ಬಳಿಕ ಕಟ್ಟಡದೊಳಗೆ ನುಗ್ಗಿದರ. ನಂತರ ಇದ್ದಕ್ಕಿದ್ದಂತೆಯೇ ಗ್ರೆನೇಡ್ ಹಾಗೂ ಗುಂಡಿನ ದಾಳಿ ನಡೆಸಲು ಆರಂಭಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. 
ಟಿವಿ ಸ್ಟೇಷನ್ ನಲ್ಲಿ ಹಲವು ಸಿಬ್ಬಂದಿಗಳಿದ್ದು, ಪ್ರಸ್ತುತ ಉಗ್ರರು ಸ್ಟೇಷನ್ ಒಳಗೆ ಸಿಬ್ಬಂದಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಉಗ್ರರ ವಿರುದ್ದ ಸೇನಾ ಪಡೆಗಳು ಇದೀಗ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಸ್ಟೇಷನ್ ಸುತ್ತಲೂ ಭದ್ರತಾ ಸಿಬ್ಬಂದಿಗಳು ಸುತ್ತುವರೆದಿದ್ದಾರೆ. 
ದಾಳಿಯ ಹೊಣೆಯನ್ನು ಈ ವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

ಮೈಸೂರು: ಕುಸಿದು ಬಿದ್ದ ದೀಪಾಲಂಕಾರದ ಬೃಹತ್ ಕಟೌಟ್; ವಿದ್ಯಾರ್ಥಿಗಳು ಪಾರು, ದಸರಾ ಆರಂಭದಲ್ಲೇ ತಪ್ಪಿದ ದೊಡ್ಡ ದುರಂತ!

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿ ಹೊಡೆದು ಯುವತಿ ಸ್ಥಳದಲ್ಲೇ ಸಾವು!

'ಕಮಾಲ್ ಕರ್ ದಿಯಾ ಪೈಲಟ್ ಜಿ, ನಿಮ್ಮ ಧೈರ್ಯಕ್ಕೆ ನಮ್ಮ ಸೆಲ್ಯೂಟ್': ಕ್ಯಾಪ್ಟನ್ ಸ್ಮಿತ್ ಮಚ್ಚರ್'ರನ್ನು ಹಾಡಿ ಹೊಗಳಿದ ಸಲ್ಮಾನ್ ಖಾನ್!

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್