ವಿದೇಶ

ಚಬಹಾರ್ ಬಂದರು ಮೂಲಕ ಆಫ್ಗಾನ್‌ಗೆ ತಲುಪಿದ ಭಾರತದ ಮೊದಲ ಸಾಗಣೆ ಹಡಗು

Vishwanath S
ಕಾಬೂಲ್: ಇರಾನಿನ ಚಬಹಾರ್ ಬಂದರು ಮೂಲಕ ಭಾರತ ಕಳುಹಿಸಿದ ಮೊದಲ ಸಾಗಣೆ ಹಡಗು ಶನಿವಾರ ಆಫ್ಗಾನಿಸ್ತಾನಕ್ಕೆ ತಲುಪಿದೆ. 
ಮೊದಲ ಸಾಗಣೆ ಹಡಗಿನಲ್ಲಿ ಭಾರತವು ಆಫ್ಗಾನಿಸ್ತಾನಕ್ಕೆ ಗೋಧಿಯನ್ನು ಸರಬರಾಜು ಮಾಡಿದ್ದು ಇದು ಚಬಹಾರ್ ಬಂದುರ ಮಾರ್ಗದ ಮೊದಲ ಹೆಗ್ಗುರುತ ಸಾಗಣೆಯಾಗಿತ್ತು. ಮೊದಲ ಸಾಗಣೆ ಹಡಗು ಬಂದರಿಗೆ ಬಂದಾಕ್ಷಣ ಹಿರಿಯ ಆಫ್ಘಾನ್ ಅಧಿಕಾರಿಗಳು ಮತ್ತು ಕಾಬೂಲ್ ಮನ್ಪ್ರೀತ್ ವೊಹ್ರಾದ ಭಾರತೀಯ ರಾಯಭಾರಿ ಅಧಿಕಾರಿಗಳು ಆಗಮಿಸಿದ್ದರು. 
ಚಬಹಾರ್ ಬಂದರು ತರೆಯುವುದರೊಂದಿಗೆ ಆಫ್ಘಾನಿಸ್ತಾನ ಇನ್ನು ಮುಂದೆ ಕರಾಚಿ ಬಂದರಿನ ಮೇಲೆ ಅವಲಂಬಿತವಾಗಿರುವುದಿಲ್ಲ. ಈ ಬಂದರು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಜತೆಗೆ ಆಫ್ಗಾನಿಸ್ತಾನ, ಇರಾನ್ ಮತ್ತು ಭಾರತಗಳಿಗೆ ಶತಕೋಟಿ ಡಾಲರ್ ಆದಾಯ ತರುತ್ತದೆ ಎಂದು ನಿಮ್ರೋಜ್ ಗವರ್ನರ್ ಮೊಹಮ್ಮದ್ ಸಾಮಿಹುಲ್ಲಾ ಹೇಳಿದ್ದಾರೆ. 
ಅಕ್ಟೋಬರ್ 29ರಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಆಫ್ಗಾನಿಸ್ತಾನದ ವಿದೇಶಾಂಗ ಸಚಿವ ಸಲಾಹುದ್ದೀನ್ ರಬ್ಬಾನಿ ಜತೆಯಾಗಿ ಭಾರತದಿಂದ ಗೋಧಿ ಸಾಗಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದರು.
SCROLL FOR NEXT