ನವದೆಹಲಿ: ವಿಜ್ಞಾನಿಗಳ ಮಹತ್ವದ ಶೋಧದಿಂದಾಗಿ ಪೋರ್ಚುಗೀಸ್ ತೀರದಲ್ಲಿ ಸಾಗರ ತಳದಲ್ಲಿ ಡೈನೋಸಾರ್ ಯುಗದ ತಿಮಿಂಗಿಲವೊಂದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಅಂತಾರಾಷ್ಟ್ರೀಯ ಆಂಗ್ಲ ದೈನಿಕ ವಾಷಿಂಗ್ಟನ್ ಪೋಸ್ಟ್ ಈ ಬಗ್ಗೆ ವರದಿ ಮಾಡಿದ್ದು, ಪೋರ್ಚುಗೀಸ್ ತೀರದಲ್ಲಿ ಸುಮಾರು 710 ಅಡಿ ಆಳದಲ್ಲಿ ಈ ಬೃಹತ್ ತಿಮಿಂಗಲ ಪತ್ತೆಯಾಗಿದೆ ಎಂದು ವರದಿ ಮಾಡಿದೆ. ವರದಿಯಲ್ಲಿರುವಂತೆ ಈ ತಿಮಿಂಗಲಕ್ಕೆ ಹಾವಿನ ತಲೆ ಇದ್ದು, ಇದರ ಬಾಯಲ್ಲಿ ಬರೊಬ್ಬರಿ 300 ಹಲ್ಲುಗಳಿವೆ ಎಂದು ಹೇಳಿದೆ. ಅಂತೆಯೇ ಈ ಜೀವಂತ ಪಳೆಯುಳಿಕೆ ಟೈರನ್ನೋಸಾರಸ್ ರೆಕ್ಸ್ ಹಾಗೂ ಟ್ರೈಸೆರಟಾಪ್ಸ್ ಇದ್ದಂತಹ ಕಾಲದ್ದಾಗಿರಬೇಕು ಹಾಗೂ 80 ಲಕ್ಷ ವರ್ಷ ಹಳೆಯದ್ದಾಗಿರಬೇಕು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ವರದಿಯಲ್ಲಿರುವಂತೆ ಯೂರೋಪಿಯನ್ ಯೂನಿಯನ್ ಪ್ರಾಜೆಕ್ಟ್ ಸಂಶೋಧಕರು, ಈ ಹಾವಿನಂತಿರುವ ಗಂಡು ತಿಮಿಂಗಿಲವನ್ನು ಅಲ್ಗಾರ್ವೇ ತೀರದಲ್ಲಿ ಕಳೆದ ಬೇಸಿಗೆಯಲ್ಲಿ ಪತ್ತೆ ಹಚ್ಚಿದ್ದರು. ಈ ಜೀವಿ ಉದ್ದ, ಸಪೂರವಾಗಿದ್ದು ಹಾವಿನಂತಹ ದೇಹಾಕೃತಿ ಹೊಂದಿದೆ ಹಾಗೂ 1.5 ಮೀಟರ್ ಉದ್ದವಿದೆ. ಈ ಜೀವಿಯನ್ನು 'ಖ್ಲಾಮಿಡೊಸೆಲ್ಖಸ್ ಎಂಗುನಿಯಸ್' ಎಂದು ಹೆಸರಿಸಲಾಗಿದ್ದು, ಅದರ 300 ಹಲ್ಲುಗಳು 25 ಸಾಲುಗಳಲ್ಲಿ ಫ್ರಿಲ್ ಮಾದರಿ ಜೋಡಿಸಲ್ಪಟ್ಟಿವೆ. ಈ ತಿಮಿಂಗಿಲಕ್ಕೆ ಆರು ಜತೆ ಗಿಲ್ ಅಥವಾ ಶ್ವಾಸಾಂಗವಿದ್ದು, ಅದರ ಅಂಚುಗಳು ನೆರಿಗೆಯಾಕಾರದಲ್ಲಿವೆ. ಸಾಗರ ತಳದಲ್ಲಿ ಸಾಕಷ್ಟು ಪೋಷಕಾಂಶಗಳು ದೊರೆಯದೆ ಈ ಜೀವಿ ಬೆಳೆದಿಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಪೋರ್ಚುಗೀಸ್ ಇನ್‍ಸ್ಟಿಟ್ಯೂಟ್ ಫಾರ್ ದಿ ಸೀ ಎಂಡ್ ಎಟ್ಮಾಸ್ಫಿಯರ್ ಈ ಜೀವಿಯನ್ನು `ಲಿವಿಂಗ್ ಫಾಸ್ಸಿಲ್' ಎಂದು ಬಣ್ಣಿಸಿದೆ. ಆಸ್ಟ್ರೇಲಿಯಾ, ಜಪಾನ್ ಮತ್ತು ನ್ಯೂಜಿಲ್ಯಾಂಡಿನಲ್ಲಿ ಇತ್ತೀಚೆಗೆ ಪತ್ತೆ ಹಚ್ಚಲಾದ ತಿಮಿಂಗಿಲಗಳ ಪಟ್ಟಿಗೆ ಇದು ಸೇರಿದೆ. ಈ ಜೀವಿ ಸಾಮಾನ್ಯವಾಗಿ ಸಾಗರ ತಳದಲ್ಲಿ 390ರಿಂದ 200 ಅಡಿಯಷ್ಟು ಕೆಳಗಿರುವುದರಿಂದ ಇದನ್ನು 19ನೇ ಶತಮಾನಕ್ಕಿಂತ ಮೊದಲು ಪತ್ತೆ ಹಚ್ಚಲಾಗಿಲ್ಲ ಎಂದು ಹೇಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos