ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ
ಬರ್ಲಿನ್: ಯುರೋಪಿಯನ್ ಒಕ್ಕೂಟವನ್ನು ಬಿಟ್ಟು ಹೊರನಡೆಯುತ್ತಿರುವ ಬ್ರಿಟನ್ ಅದರ ಹಣಕಾಸು ಬದ್ದತೆಗಳನ್ನು ಪೂರೈಸುವ ಸಲುವಾಗಿ ಕನಿಷ್ಠ 60 ಶತಕೋಟಿ ಯುರೋಗಳಷ್ಟು (70 ಬಿಲಿಯನ್ ಡಾಲರ್) ಪಾವತಿಸುತ್ತದೆ ಎಂದು ತಾನು ನಂಬಿರುವುದಾಗಿ ಯುರೋಪಿಯನ್ ಸಂಸತ್ತಿನ ಅಧ್ಯಕ್ಷರು ಹೇಳಿದ್ದಾರೆ.
2019. ಮಾರ್ಚ್ ವೇಳೆಗೆ ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರನಡೆಯಲಿದೆ. ಹೀಗಾಗಿ ಬ್ರಿಟನ್ ತಾನು ಒಕ್ಕೂಟದ ಹಣಕಾಸು ಬದ್ದತೆಗಳನ್ನು ಪೂರೈಸುವ ಸಲುವಾಗಿ ಹಣವನ್ನು ಪಾವತಿಸಬೇಕು ಎನ್ನುವುದು ಒಕ್ಕೂಟದ ಬೇಡಿಕೆಯಾಗಿದೆ.
ಯುರೋಪಿಯನ್ ಸಂಸತ್ತಿನ ಅಧ್ಯಕ್ಷ ಆಂಟೋನಿಯೊ ತಜನಿ ಜರ್ಮನಿಯ 'ಫನ್ಕೆ' ಮಾದ್ಯಮ ಸಮೂಹಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಬ್ರಿಟನ್ ಎಷ್ಟು ಮೊತ್ತ ಪಾವತಿಸಬೇಕು? ಎಂದು ಕೇಳಲಾದ ಪ್ರಶ್ನೆಗೆ "ನನ್ನ ಅಭಿಪ್ರಾಯದಲ್ಲಿ, ಕನಿಷ್ಠ 60 ಶತಕೋಟಿ ಯೂರೋಗಳು" ಎಂದು ಉತ್ತರಿಸಿದ್ದಾರೆ.