ವಿದೇಶ

ರೊಹಿಂಗ್ಯಾ ಮಹಿಳೆಯರ ಮೇಲೆ ಮಯನ್ಮಾರ್ ಸೈನಿಕರಿಂದ ವ್ಯವಸ್ಥಿತ ಸಾಮೂಹಿಕ ಅತ್ಯಾಚಾರ!

Srinivasamurthy VN
ಢಾಕಾ: ನಿರಾಶ್ರಿತ ರೊಹಿಂಗ್ಯಾ ಮುಸ್ಲಿಂ ಮಹಿಳೆಯರ ಮೇಲೆ ಮಯನ್ಮಾರ್ ಸೈನಿಕರು ವ್ಯವಸ್ಥಿತ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ವಿಶ್ವಸಂಸ್ಥೆಯ ಲೈಂಗಿಕ ದೌರ್ಜನ್ಯ ವಿಭಾಗದ ಕಾರ್ಯದರ್ಶಿ ಪ್ರಮಿಳಾ ಪ್ಯಾಟನ್  ಹೇಳಿದ್ದಾರೆ.
ಭಾನುವಾರ ಬಾಂಗ್ಲಾದೇಶದಲ್ಲಿರುವ ರೊಹಿಂಗ್ಯಾ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿದ್ದ ಪ್ರಮಿಳಾ ಪ್ಯಾಟನ್ ಅವರು, ನಿರಾಶ್ರಿತ ಶಿಬಿರದಲ್ಲಿನ ಮಹಿಳೆಯರಿಂದ ಮಯನ್ಮಾರ್ ಸೈನಿಕರ ದೌರ್ಜನ್ಯದ ಕುರಿತು ಮಾಹಿತಿ ಪಡೆದರು. ಈ  ವೇಳೆ ಮಯನ್ಮಾರ್ ಸೈನಿಕರು ರೊಹಿಂಗ್ಯಾ ಮುಸ್ಲಿಂ ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ಸಾಮೂಹಿಕ ಅತ್ಯಾಚಾರ ನಡೆಸುತ್ತಿದ್ದ ವಿಚಾರ ಬಹಿರಂಗವಾಗಿದೆ ಎಂದು ಹೇಳಿದ್ದಾರೆ.
ಮಯನ್ಮಾರ್ ನಲ್ಲಿ ಉಂಟಾದ ರೊಹಿಂಗ್ಯಾ ನಿರಾಶ್ರಿತರ ವಿರುದ್ಧದ ಕಾರ್ಯಾಚರಣೆ ವೇಳೆ ಮಯನ್ಮಾರ್ ಸೈನಿಕರು ಮಾನವೀಯತೆಯನ್ನೇ ಮರೆತು ವರ್ತಿಸಿದ್ದು, ಮಕ್ಕಳು, ವೃದ್ಧರು ಎಂದು ನೋಡದೇ ದೌರ್ಜನ್ಯ ನಡೆಸಿದ್ದಾರೆ. ಈ ವೇಳೆ ಹಲವು ಯುವತಿಯರನ್ನು ಪುಟ್ಟ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಹತ್ತಾರ ಹೆಣ್ಣು ಮಕ್ಕಳು ಅತ್ಯಾಚಾರವಾಗುವಾಗಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಕಾರ್ಯಾಚರಣೆ ನೆಪದಲ್ಲಿ ಮಹಿಳೆಯರನ್ನು ನಗ್ನವಾಗಿ ಸಾರ್ವಜನಿಕವಾಗಿ ನಿಲ್ಲಿಸುತ್ತಿದ್ದ ಕುರಿತೂ ಮಹಿಳೆಯರು ಮಾಹಿತಿ ನೀಡಿದ್ದಾರೆ. 
ಓರ್ವ ಪುಟ್ಟ ಬಾಲಕಿಯನ್ನು ಬರೊಬ್ಬರಿ 45 ದಿನಗಳ ಕಾಲ ಬಂಧನಕ್ಕೀಡು ಮಾಡಿದ್ದ ಸೈನಿಕರು 45 ದಿನವೂ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಆಕೆಯ ದೇಹದ ಮೇಲೆ ಸೈನಿಕರು ಕಚ್ಚಿರುವ ಮತ್ತು ಸುಟ್ಟಿರುವ ಗಾಯಗಳು ಹಾಗೇ ಇದ್ದು, ಇದು ಸೈನಿಕರ ಅಮಾನವೀಯತೆಯನ್ನು ತೋರಿಸುತ್ತದೆ ಎಂದು ಪ್ಯಾಟನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತೆಯೇ ಈ ಬಗ್ಗೆ ವಿಶ್ವ ಸಂಸ್ಥೆಗೆ ವರದಿ ಸಲ್ಲಿಸುವುದಾಗಿಯೂ ಪ್ಯಾಟನ್ ಹೇಳಿದ್ದಾರೆ.
SCROLL FOR NEXT