ನರೇಂದ್ರ ಮೋದಿ 
ವಿದೇಶ

ಭಾರತವನ್ನು ರೂಪಾಂತರಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇನೆ: ಅಷಿಯಾನ್ ಫೋರಂನಲ್ಲಿ ಮೋದಿ

ಭಾರತವನ್ನು ರೂಪಾಂತರಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ...

ಮನಿಲಾ: ಭಾರತವನ್ನು ರೂಪಾಂತರಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 
ಅಷಿಯಾನ್ ಬ್ಯುಸಿನೆಸ್ ಫೋರಂ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಸರ್ಕಾರದ ಆರ್ಥಿಕ ಸುಧಾರಣಾ ಕ್ರಮಗಳನ್ನು ಪ್ರದರ್ಶಿಸಿದ್ದು ಭಾರತದಲ್ಲಿ ತಮ್ಮ ಹೂಡಿಕೆಗಳನ್ನು ಹೆಚ್ಚಿಸಲು ಅಷಿಯಾನ್ ದೇಶಗಳನ್ನು ಆಹ್ವಾನಿಸಿದರು. ಮತ್ತು ದೇಶವನ್ನು ಪರಿವರ್ತಿಸುವ ಕಾರ್ಯವು ಅತಿದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಎಂದರು. 
ಆಕ್ಟ್ ಈಸ್ಟ್ ಪಾಲಿಸಿಯಿಂದಾಗಿ ಭಾರತದಲ್ಲಿ ಬಂಡವಾಳ ಹೂಡಲು ಸುಲಭವಾಗಿದೆ. ಇನ್ನು ಭಾರತೀಯ ಆರ್ಥಿಕತೆಯ ಹೆಚ್ಚಿನ ಕ್ಷೇತ್ರಗಳು ವಿದೇಶಿ ಹೂಡಿಕೆಗೆ ತೆರದಿವೆ. ಜತೆಗೆ ನಾವು ಸುಲಭ ಮತ್ತು ಪರಿಣಾಮಕಾರಿ ಮತ್ತು ಪಾರದರ್ಶಕ ಆಡಳಿತ ನೀಡುವುದಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇವೆ ಎಂದರು. 
ತಮ್ಮ ಸರ್ಕಾರ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಮಾಡಲು ಮತ್ತು ಯುವ ಉದ್ಯೋಗ ಸೃಷ್ಠಿಕರ್ತರನ್ನು ರಚಿಸಲು ಪ್ರಯತ್ನಿಸುತ್ತಿದೆ. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದ ಮೇಲೆ ನಮ್ಮ ನಂಬಿಕೆ ಇಟ್ಟು ಕಳೆದ ಮೂರು ವರ್ಷಗಳಲ್ಲಿ ಸುಮಾರು 1,200 ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಇನ್ನು ಸಂಸ್ಥೆಗಳನ್ನು ಪ್ರಾರಂಭಿಸಲು ಮತ್ತು ಇತರ ಅನುಮತಿಗಳಿಗಾಗಿ ನಾವು ಪ್ರಕ್ರಿಯೆಗಳನ್ನು ಸರಳಗೊಳಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 
ಭಾರತದಲ್ಲಿ ಡಿಜಿಟಲ್ ವಹಿವಾಟುಗಳು ಗಣನೀಯವಾಗಿ ಹೆಚ್ಚಾಗಿದ್ದು ಜನರನ್ನು ತಲುಪಲು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಭಾರತದ ಜನಸಂಖ್ಯೆಯ ಹೆಚ್ಚಿನ ಭಾಗಗಳಲ್ಲಿ ಬ್ಯಾಂಕಿಂಗ್ ಸೇವೆಗಳೇ ಇಲ್ಲವಾಗಿವೆ. ಈಗಿರುವಾಗ ಜನ್ ಧನ್ ಯೋಜನೆ ಕೋಟ್ಯಾಂತರ ಜನರಿಗೆ ಪ್ರಯೋಜನವಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಇದು ನನ್ನ ಮನದ ಆಸೆ’: ಸಿಎಂ ಹುದ್ದೆ ತೊರೆದು ರಾಜ್ಯಸಭೆ ಪ್ರವೇಶ ಖಚಿತಪಡಿಸಿದ Nitish Kumar

'ರೇಪ್ ಮಾಡಿ ಅನ್ನೋನು ಯಾವ ಸೀಮೆ ನಾಯಕ'.. 'ಬಾಂಬ್ ಅಲ್ಲ.. ಇರಾನಿಯನ್ನರು Khamenei ಆಡಳಿತಕ್ಕೆ ಹೆಚ್ಚು ಭಯಪಡುತ್ತಾರೆ': ನಟಿ ಆಕ್ರೋಶ! VIDEO

ರಾಜ್ಯಸಭೆ ಚುನಾವಣೆಗೆ ಇಂದು ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ?: NDAಯಲ್ಲಿ ಮಹತ್ವದ ಬೆಳವಣಿಗೆ

T20 World Cup 2026: ಭಾರತದ ಸಂಭಾವ್ಯ ಪ್ಲೇಯಿಂಗ್ XI vs ಇಂಗ್ಲೆಂಡ್; ಕೋಚ್ ಗೌತಮ್ ಗಂಭೀರ್‌ಗೆ ಕಠಿಣ ಸವಾಲು

T20 ವಿಶ್ವಕಪ್ 2026: 8 ಸಿಕ್ಸರ್ 10 ಬೌಂಡರಿ.. ವೇಗದ ಶತಕ: ವಿಂಡೀಸ್ ದೈತ್ಯ chris gayle ದಾಖಲೆ ಮುರಿದ Finn Allen!

SCROLL FOR NEXT