ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ವಿಶೇಷ ಭಯೋತ್ಪಾದನಾ ವಲಯಗಳನ್ನು ಕೂಡಲೇ ಪಾಕಿಸ್ತಾನ ಖಾಲಿ ಮಾಡಬೇಕು ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಆಗ್ರಹಿಸಿದೆ.
ಸೋಮವಾರ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಸಲ್ಲಿಕೆ ಮಾಡಿದ ಸಾರ್ವತ್ರಿಕ ನಿಯತಕಾಲಿಕ ವಿಮರ್ಶೆ (universal periodic review) ಬಳಿಕ ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಭಯೋತ್ಪಾದನಾ ಶಿಬಿರಗಳ ಕುರಿತು ಚಕಾರ ಎತ್ತಿತು. ಅಲ್ಲದೇ ಈ ಉಗ್ರ ಶಿಬಿರಗಳಿಗೆ ಪಾಕ್ ಸೇನೆಯ ನೆರವಿದೆ ಎಂದು ಹೇಳಿತು.
ಪಾಕಿಸ್ತಾನ ಸಲ್ಲಿಕೆ ಮಾಡಿರುವ ಯುಪಿಆರ್ ಗೆ ವಿರೋಧ ವ್ಯಕ್ತಪಡಿಸಿದ ಭಾರತ ಪಿಒಕೆಯಲ್ಲಿ ಪಾಕಿಸ್ತಾನ ಸೇನೆಯ ನೆರವಿನಿಂದಾಗಿ ಉಗ್ರ ಸಂಘಟನೆಗಳು ಮತ್ತು ಉಗ್ರರು ಅಕ್ರಮವಾಗಿ ಶಿಬಿರಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಭಯೋತ್ಪಾದಕರಿಗೆ ಇದು ಅವರ ಭದ್ರತಾ ವಲಯವಾಗಿ ಮಾರ್ಪಟ್ಟಿದ್ದು, ಉಗ್ರರ ಸ್ವರ್ಗವಾಗಿ ಮಾರ್ಪಟ್ಟಿದೆ. ಇಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಭಾರತದ ವಿರುದ್ಧ ಬಹಿರಂಗ ಸಮರ ಸಾರಿದ್ದಾರೆ ಎಂದು ಭಾರತ ತನ್ನ ಅಸಮಾಧಾನ ವ್ಯಕ್ತಪಡಿಸಿತು.
ಅಲ್ಲದೆ ಪಾಕಿಸ್ತಾನ ಆಡಳಿತ ಪಿಒಕೆಯಲ್ಲಿ ಅಕ್ರಮವಾಗಿ ನುಸುಳಿರುವ ಉಗ್ರರು ಮತ್ತು ಅಕ್ರಮ ನುಸುಳುಕೋರರನ್ನು ಹಿಮ್ಮೆಟಿಸುವ ಮೂಲಕ ಪಿಒಕೆಯಲ್ಲಿರುವ ಪ್ರಜೆಗಳಿಗೆ ಸ್ವತಂತ್ರ್ಯ ನೀಡಬೇಕು ಎಂದು ಆಗ್ರಹಿಸಿದೆ.
ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ನಿಯಮಿತವಾಗಿ ತಮ್ಮ ಪ್ರಾದೇಶಿಕ ಭದ್ರತೆಯ ಕುರಿತು ಮತ್ತು ಉಗ್ರ ದಮನ ಕಾರ್ಯಾಚರಣೆಯಲ್ಲಿ ತಾವು ಕೈಗೊಂಡ ಕ್ರಮಗಳ ಕುರಿತು ವಿಶ್ವಸಂಸ್ಥೆಗೆ ಮಾಹಿತಿ ನೀಡಬೇಕು. ಅದರಂತೆ ನಿನ್ನೆ ಪಾಕಿಸ್ತಾನ ತನ್ನ ಸಾರ್ವತ್ರಿಕ ನಿಯತಕಾಲಿಕ ವಿಮರ್ಶೆ ಸಲ್ಲಿಕೆ ಮಾಡಿದ್ದು, ಇದಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದೆ. ಇದು ಪಾಕಿಸ್ತಾನ ಸಲ್ಲಿಕೆ ಮಾಡಿದ 3ನೇ ಯುಪಿಆರ್ ವಿಮರ್ಶೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics