ವಿಶ್ವಸಂಸ್ಥೆ: ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಕ್ಕೆ ಸ್ಪರ್ಧಿಸಿರುವ ಭಾರತದ ಅಭ್ಯರ್ಥಿ ದಲ್ವೀರ್ ಬಂಡಾರಿ ಅವರ ಗೆಲುವಿನ ಸಾಧ್ಯತೆಗಳು ಹೆಚ್ಚಿದ್ದು, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳು ಕಂಗಾಲಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಂಡಾರಿ ಹಾಗೂ ಬ್ರಿಟನ್ ನ ಕ್ರಿಸ್ಟೊಫೋರ್ ಗ್ರೀನ್ ವುಡ್ ನಡುವೆ ಪೈಪೋಟಿ ನಡೆಯುತ್ತಿದ್ದು, ರಷ್ಯಾ, ಅಮೆರಿಕ, ಫ್ರಾನ್ಸ್, ಚೀನಾ ಗ್ರೀನ್ ವುಡ್ ಗೆ ಬೆಂಬಲವಾಗಿ ನಿಂತಿದೆ. 11 ಸುತ್ತಿನ ಮತದಾನದಲ್ಲಿ ಬಂಡಾರಿಗೆ ವಿಶ್ವಸಂಸ್ಥೆ ಮಹಾಸಭೆಯ ಮೂರನೇ ಎರಡರಷ್ಟು ಸದಸ್ಯರು ಬೆಂಬಲ ದೊರೆತಿದ್ದು, ಗ್ರೀನ್ ವುಡ್ ಗಿಂತ ಕೇವಲ ಮೂರು ಮತಗಳು ಹಿಂದಿದ್ದಾರೆ. ಈ ಬೆಳವಣಿಗೆ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳಲ್ಲಿ ಆತಂಕ ಉಂಟುಮಾಡಿದೆ.
ನ.20 ರಂದು 12 ನೇ ಸುತ್ತಿನ ಮತದಾನ ನಡೆಯಲಿದ್ದು, ಬ್ರಿಟನ್ ಅನೌಪಚಾರಿಕ ಸಮಾಲೋಚನೆಯಲ್ಲಿ ಜಂಟಿ ಕಾನ್ಫರೆನ್ಸ್ ಕಾರ್ಯವಿಧಾನದ ಕಲ್ಪನೆಯನ್ನು ಸೂಚಿಸಿದೆ. ಭಾರತದ ಅಭ್ಯರ್ಥಿಗೆ ಸುಲಭವಾಗಿ ಮೂರನೇ ಎರಡರಷ್ಟು ಮತಗಳು ಲಭ್ಯವಾಗುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಬ್ರಿಟನ್ ಮುಂದಿನ ಹಂತದ ಮತದಾನವನ್ನು ತಪ್ಪಿಸಲು ಈ ದಾರಿ ಕಂಡುಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.