ವಿದೇಶ

ಹಫೀಸ್‌ ಸಯೀದ್‌ ನನ್ನು ಪಾಕ್ ಮತ್ತೊಂದು ಪ್ರಕರಣದಲ್ಲಿ ಬಂಧಿಸದಿದ್ದರೆ ಉಗ್ರ ಬಂಧಮುಕ್ತ

Lingaraj Badiger
ಲಾಹೋರ್‌: ಮುಂಬೈ ದಾಳಿ ರೂವಾರಿ, ಜಮಾತ್ ಉದ್ ದವಾ(ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಸ್ ಸಯೀದ್‌ನನ್ನು ಗೃಹ ಬಂಧನದಿಂದ ಬಿಡುಗಡೆ ಮಾಡುವಂತೆ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ನ್ಯಾಯಾಂಗ ಪರಿಶೀಲನಾ ಮಂಡಳಿ ನಿನ್ನೆ ಆದೇಶಿಸಿದ್ದು, ಒಂದು ವೇಳೆ ಪಾಕ್ ಮತ್ತೊಂದು ಪ್ರಕರಣದಲ್ಲಿ ಆತನನ್ನು ಬಂಧಿಸದಿದ್ದರೆ ಗುರುವಾರ ರಾತ್ರಿಯಿಂದಲೇ ಬಂಧಮುಕ್ತವಾಗಲಿದೆ ಎಂದು ಸಯೀದ್ ವಕೀಲರು ತಿಳಿಸಿದ್ದಾರೆ.
'ಸರ್ಕಾರ ಸಯೀದ್ ಅವರನ್ನು ಮತ್ತೊಂದು ಪ್ರಕರಣದಲ್ಲಿ ಬಂಧಿಸದಿದ್ದರೆ ಇಂದು ಮಧ್ಯರಾತ್ರಿಯೇ ಅವರು ಬಂಧಮುಕ್ತರಾಗಲಿದ್ದಾರೆ. ಆದರೆ ಪಂಜಾಬ್ ಸರ್ಕಾರ ಸಯೀದ್ ನನ್ನು ಮತ್ತೊಂದು ಪ್ರಕರಣದಲ್ಲಿ ಬಂಧಿಸುವ ಸಾಧ್ಯತೆ ಇದೆ' ಎಂದು ಅವರ ವಕೀಲ ಎ ಕೆ ಡೊಗರ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಸಯೀದ್ ಅವರು ಇಂದು ರಾತ್ರಿ ಬಿಡುಗಡೆಯಾಗುತ್ತಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಜೆಯುಡಿಯ ನೂರಾರು ಕಾರ್ಯಕರ್ತರು ಅವರ ಲಾಹೋರ್ ನಿವಾಸದಲ್ಲಿ ಬಳಿ ತಮ್ಮ ನಾಯಕನನ್ನು ಸ್ವಾಗತಿಸಲು ಸಿದ್ಧವಾಗಿದ್ದಾರೆ ಎಂದು ಡೊಗರ್ ಹೇಳಿದ್ದಾರೆ.
ಹಫೀಸ್‌ ಬೇರೆ ಪ್ರಕರಣಗಳಲ್ಲಿ ಬೇಕಿಲ್ಲದ ಪಕ್ಷದಲ್ಲಿ ಆತನನ್ನು ಬಿಡುಗಡೆ ಮಾಡಿ ಎಂದು ನಿನ್ನೆ ಲಾಹೋರ್‌ ಹೈಕೋರ್ಟ್‌ ನ್ಯಾಯಮೂರ್ತಿ ಅಬ್ದುಲ್‌ ಸಮಿ ಖಾನ್‌ ನೇತೃತ್ವದ ಮಂಡಳಿ ಸರ್ಕಾರಕ್ಕೆ ನಿರ್ದೇಶಿಸಿದೆ.
SCROLL FOR NEXT