ವಿದೇಶ

ಲಾಸ್ ವೆಗಾಸ್ ನ ಸಂಗೀತ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: 20 ಸಾವು,100 ಕ್ಕೂ ಹೆಚ್ಚು ಮಂದಿಗೆ ಗಾಯ

Raghavendra Adiga
ಲಾಸ್ ವೆಗಾಸ್: ಲಾಸ್ ವೆಗಾಸ್ ನಲ್ಲಿ ಭಾನುವಾರ ನಡೆದ  ಸಂಗೀತ ಕಾರ್ಯಕ್ರಮವೊಂದರಲ್ಲಿ ಗುಂಡಿನ ದಾಳಿ ಸಂಬವಿಸಿದೆ.ದಾಳಿಗೊಳಗಾದ ಹಲವರು ಆಸ್ಪತ್ರೆ ಸೇರಿದ್ದಾರೆ.
ರೂಟ್ ನಂ 91 ಹಾರ್ವೆಸ್ಟ್ ಫೆಸ್ಟಿವಲ್ ಓರ್ವ ಬಂದೂಕುಧಾರಿ ಸತತವಾಗಿ ಗುಂಡಿನ ದಾಳಿ ನಡೆಸಿದ್ದಾನೆ ಎನ್ನುವ ಮಾಹಿತಿ ತಿಳಿದ ಪೋಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿದರು.
ಯುನಿವರ್ಸಿಟಿ ಮೆಡಿಕಲ್ ಸೆಂಟರ್ ನ  ವಕ್ತಾರ ಡ್ಯಾನಿಟಾ ಕೋಹೆನ್ "ಗುಂಡಿನ ದಾಳಿಯಿಂದ ಗಾಯಗೊಂಡ ಹಲವಾರು ಜನರನ್ನು ಲಾಸ್ ವೆಗಾಸ್ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ಘಟನೆ ಕುರಿತಾಗಿ ನನಗೆ ಹೆಚ್ಚಿನ ಮಾಹಿತಿ ಇನ್ನೂ ತಿಳಿದಿಲ್ಲ" ಎಂದಿದ್ದಾರೆ.
ಘಟನೆ ನಡೆದ ಲಾಸ್ ವೆಗಾಸ್ ಸ್ಟ್ರಿಪ್ ಮತ್ತು ಇಂಟರ್ಸ್ಟೇಟ್ 15 ಮಾರ್ಗವನ್ನು ಪೋಲೀಸ್ ಅಧಿಕಾರಿಗಳು ಮುಚ್ಚಿದ್ದಾರ.
ಮ್ಯಾಂಡಲೆ ಬೇ ಹೊಟೇಲ್ ಮತ್ತು ಕ್ಯಾಸಿನೊದಿಂದ ಭಾನುವಾರದ ಘಟನೆಗೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಘಟನೆಯ ಕುರಿತಂತೆ ಸಿಕ್ಕಿರುವ ಇತ್ತೀಚಿನ ಮಾಹಿತಿ ಪ್ರಕಾರ ಘಟನೆಯಲ್ಲಿ 20 ಜನ ಮೃತರಾಗಿದ್ದು 100ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.
SCROLL FOR NEXT