ವಿದೇಶ

ಬ್ರಿಟಿಷ್ ಲೇಖಕ ಕಜುವೊ ಇಶಿಗುರೊಗೆ 2017ನೇ ಸಾಲಿನ ಸಾಹಿತ್ಯ ನೊಬೆಲ್‌ ಪ್ರಶಸ್ತಿ

Lingaraj Badiger
ಸ್ಟಾಕ್ ಹೋಮ್: ‘ದಿ ರಿಮೇನ್ಸ್ ಆಫ್ ದಿ ಡೇ’ ಕಾದಂಬರಿ ಖ್ಯಾತಿಯ ಬ್ರಿಟಿಷ್ ಲೇಖಕ ಕಜುವೊ ಇಶಿಗುರೊ ಅವರಿಗೆ 2017ನೇ ಸಾಲಿನ ಪ್ರತಿಷ್ಠಿತ ಸಾಹಿತ್ಯ ನೊಬೆಲ್‌ ಪ್ರಶಸ್ತಿ ಲಭಿಸಿದೆ.
ಸ್ವಿಡಿಶ್ ಅಕಾಡೆಮಿ ಇಂದು 2017ನೇ ಸಾಲಿನ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಪ್ರಕಟಿಸಿದ್ದು, 9 ಮಿಲಿಯನ್ (1.1 ಮಿಲಿಯನ್ ಡಾಲರ್) ಮೊತ್ತದ ಪ್ರಶಸ್ತಿ ಇಶಿಗುರೋ ಮುಡಿಗೇರಿದೆ.

62 ವರ್ಷದ ಇಶಿಗುರೊ ಅವರು ‘ದಿ ರಿಮೇನ್ಸ್ ಆಫ್ ದಿ ಡೇ’ ಕಾದಂಬರಿಗಾಗಿ 1989ರಲ್ಲಿ ಮ್ಯಾನ್ ಬುಕರ್ ಪ್ರಶಸ್ತಿಗೆ ಪಾತ್ರರಾಗಿದ್ದರು. ಕಝುವೋ ಇಶಿಗುರೋ ಅವರು 8 ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೇ ಸಿನಿಮಾ ಹಾಗೂ ಟೆಲಿವಿಷನ್ ಗೆ ಕಥೆ ಬರೆಯುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.

ಖ್ಯಾತ ವಿಜ್ಞಾನಿ ಅಲ್ಪ್ರೆಡ್ ನೊಬಲ್ ಅವರ ನೆನಪಿಗಾಗಿ ಪ್ರತಿವರ್ಷ ವಿಜ್ಞಾನ, ಕಲೆ, ಸಾಹಿತ್ಯ, ಶಾಂತಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೋಬೆಲ್ ಪ್ರಶಸ್ತಿ ನೀಡಲಾಗುತ್ತದೆ.
SCROLL FOR NEXT