ದುಬೈ ಯುವರಾಜ ಶೇಖ್ ಹಮ್ದಾನ್ ಬಿನ್ ಮುಹಮ್ಮದ್
ಅಬುಧಾಜಿ; ವಿಶ್ವದಲ್ಲಿಯೇ ಅತ್ಯಂತ ಸಕ್ರಿಯ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು, ಅ.20ರಿಂದ ನ.18ರವರೆಗೆ 30 ದಿನಗಳ ಕಾಲ ದುಬೈ ನಿವಾಸಿಗಳಿಗೆ, ಅಲ್ಲಿನ ಯುವರಾಜ ಶೇಖ್ ಹಮ್ದಾನ್ ಬಿನ್ ಮುಹಮ್ಮದ್ ಒಂದು ಹೊಸ ಟಾರ್ಗೆಟ್' ವೊಂದನ್ನು ನೀಡಿದ್ದಾರೆ.
30 ದಿನಗಳ ಕಾಲ ದುಬೈ ನಿವಾಸಿಗಳು ಪ್ರತಿನಿತ್ಯ ಕನಿಷ್ಠ 30 ನಿಮಿಷ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಶೇಖ್ ಹಮ್ದಾನ್ ಬಿನ್ ಮುಹಮ್ಮದ್ ನಿರ್ದೇಶಿಸಿದ್ದಾರೆ.
ದಿನಕ್ಕೆ ಅರ್ಧ ಗಂಟೆ ನಡೆಯಿರಿ, ಸೈಕಲ್ ಹೊಡೆಯಿರಿ. ಈಜು ಹೊಡೆಯಿರಿ. ಒಟ್ಟಾರೆ ಏನನ್ನಾದರೂ ಮಾಡಿ. ಪ್ರತಿಯೊಬ್ಬ ನಾಗರೀಕರನೂ ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಸಫಾ ಪಾರ್ಕ್ ನಲ್ಲಿ ಅ.20 ರಂದು ನಡೆಯಲಿರುವ ಉತ್ಸವದಲ್ಲಿ 30*30 ದುಬೈ ಫಿಟ್ನೆಸ್ ಚಾಲೆಂಚ್ ಗೆ ಚಾಲನೆ ದೊರೆಯಲಿದೆ. ಎಲ್ಲಾ ವಯೋಮಾನದ ಜನರನ್ನೂ ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕಾರ್ಯಕ್ರಮದಲ್ಲಿ ಉತ್ತೇಜಿಸಲಾಗುತ್ತದೆ.
ಕಾರ್ಪೋರೇಟ್ ಉದ್ಯಮ ಸಂಸ್ಥೆಗಳು, ಶಾಲೆಗಳು, ಸರ್ಕಾರಿ ಸಂಸ್ಥೆಗಳು ಸೇರಿದಂತೆ ದುಬೈ ನಿವಾಸಿಗಳು ಕಚೇರಿ, ಮನೆಗಳಲ್ಲಿ ಅಥವಾ ಯಾವುದೇ ಪ್ರದೇಶದಲ್ಲಿ ಜೊತೆಯಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂಬುದು ಕಾರ್ಯಕ್ರಮದ ಉದ್ದೇಶ. ಒಂದು ವೇಳೆ ನೀವು ಫಿಟ್ ಆಗಬೇಕು, ಅದಕ್ಕಾಗಿ ಒಂದಷ್ಟು ವರ್ಕ್'ಔಟ್ ಮಾಡಬೇಕೆಂದು ಯೋಚಿಸುತ್ತಿದ್ದರೆ, ಅದನ್ನು ಈಡೇರಿಸಲು ಬದಲಾವಣೆಗೆ ಇಂದೊಂದು ಸುಸಂದರ್ಭ ಎಂದು ಕಾರ್ಯಕ್ರಮದ ಸಂಘಟಕರು ಹೇಳಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ನಡೆಯುವ ವಿವಿಧ ಚಟುವಟಿಕೆಗಳಿಗೆ ಬಹುಮಾನಗಳನ್ನೂ ನಿಗದಿ ಮಾಡಲಾಗಿದೆ. ಆಸಕ್ತರು ದುಬೈ ಫಿಟ್'ನೆಸ್ ಚಾಲೆಂಜ್ ಆ್ಯಪ್ ಮೂಲಕ ತಮ್ಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬಹುದಾಗಿದೆ.
ಈ ಆ್ಯಪ್ ನಲ್ಲಿ 1,500ಕ್ಕೂ ಅಧಿಕ ಉಚಿತ ತರಬೇತಿ ತರಗತಿಗಳ ಮಾಹಿತಿಯೂ ಲಭ್ಯವಿದ್ದು, ವಿವಿಧ ಫಿಟ್ ನೆಟ್ ಔಟ್'ಲೆಟ್ ಗಳಲ್ಲಿನ ಡಿಸ್ಕೌಂಟ್'ಗಳ ಬಗ್ಗೆ ಮತ್ತು ಅವುಗಳಿಗಿರುವ ಸ್ಥಳಗಳ ಬಗ್ಗೆ ಮಾಹಿತಿಯೂ ದೊರೆಯುತ್ತದೆ.