ವಿದೇಶ

ಚೀನಾ: 24 ಗಂಟೆ ವೀಡಿಯೋ ಗೇಮ್ ಆಡಿ ದೃಷ್ಟಿ ಕಳೆದುಕೊಂಡ ಮಹಿಳೆ

Raghavendra Adiga
ಬೀಜಿಂಗ್: 24 ಗಂಟೆಗಳ ಕಾಲ ಸ್ಮಾರ್ಟ್ ಪೋನ್ ನಲ್ಲಿ ವೀಡಿಯೋ ಗೇಮ್ ಆಡಿದ 21 ವರ್ಷದ ಚೀನಾದ ಮಹಿಳೆ ಓರ್ವರು ಭಾಗಷಃ ದೃಷ್ಟಿ ಕಳೆದುಕೊಂಡಿದ್ದಾರೆಂದು ಮಾದ್ಯಮ ವರದಿ ತಿಳಿಸಿದೆ.
ಅನಾಮಧೇಯ ವೀಡಿಯೋ ಗೇಮ್ ವ್ಯಸನಿ ಬಹು ಜನರು ಒಟ್ಟಿಗೇ ಆಡಬಹುದಾದ "ಹಾನರ್ ಆಫ್ ಕಿಂಗ್ಸ್"  ಆನ್ ಲೈನ್ ಗೇಮ್ ಅನ್ನು ಆಡುತ್ತಿದ್ದರು. ಸತತವಾಗಿ ಗೇಮ್ ಆಡಿದ ಪರಿಣಾಮ ಆಕೆಯ ಬಲ ಕಣ್ಣು ದೃಷ್ಟಿ ಕಳೆದುಕೊಂಡಿದೆ ಎಂದು ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ರೆಟಿನಲ್ ಆರ್ಟರಿ ಅಕ್ಲೂಷನ್ (ಆರ್ ಎಸಿ) ಆಗಿರುವುದು ತಿಳಿದು ಬಂದಿದೆ. 
ಆಕೆ ಏನೊಂದೂ ವಿಶ್ರಾಂತಿ ಪಡೆಯದೆ ಪರದೆಯನ್ನು ನೋಡಿದ್ದ ಕಾರಣ ಕಣ್ಣಿನ ಮೇಲೆ ಒತ್ತಡ ಉಂಟಾಗಿದೆ ಎಂದು ವೈದ್ಯರು ಹೇಳಿದರು. ಹಣಕಾಸು ವ್ಯವಹಾರ ನಿರ್ವಹಿಸುವವರಲ್ಲಿ ಸಾಮಾನ್ಯವಾಗಿ ಈ ರೋಗ ಲಕ್ಷಣಗಳು ಕಂಡು ಬರುತ್ತವೆ ಎಂದು ವೈದ್ಯರು ಹೇಳಿದ್ದಾರೆ.
ಐತಿಹಾಸಿಕ ಯುದ್ಧದ ಆಟವಾದ "ಕಿಂಗ್ ಆಫ್ ಹಾನರ್" ನ್ನು ಚೀನಾದಲ್ಲಿ 200 ಮಿಲಿಯನ್ ನೋಂದಾಯಿತ ಆಟಗಾರರನ್ನು ಹೊಂದಿದೆ. ಇದು ಆ ರಾಷ್ಟ್ರದ ಅತ್ಯಂತ ಜನಪ್ರಿಯ ಆನ್ ಅಲೈನ್ ಆಟವಾಗಿದೆ.
ಆನ್ ಲೈನ್ ಆಟಗಳನ್ನು ಆಡುವಾಗ, ಪ್ರತಿ ಅರ್ಧ ಗಂಟೆಯ ನಂತರ ವಿರಾಮವನ್ನು ತೆಗೆದು ಕೊಳ್ಳುವುದು ಅಗತ್ಯವಾಗಿದೆ. ಇಲ್ಲದೆ ಹೋದಲ್ಲಿ ಅದು ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
SCROLL FOR NEXT