ಮಹಿಂದಾ ರಾಜಪಕ್ಷೆ 
ವಿದೇಶ

ಭಾರತ ವಿರೋಧಿ ಪ್ರತಿಭಟನೆ, ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಪುತ್ರನ ಬಂಧನ

ಭಾರತದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿದ್ದನೆನ್ನುವ ಕಾರಣಕ್ಕೆ ಶ್ರೀಲಂಕಾದ ಮಾಜಿ ಅಧ್ಯಕ್ಷರ ಪುತ್ರರನ್ನು ಶ್ರೀಲಂಕಾ ಪೋಲೀಸರು ಬಂಧಿಸಿದ್ದಾರೆ.

ಕೊಲಂಬೊ: ಭಾರತದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿದ್ದನೆನ್ನುವ ಕಾರಣಕ್ಕೆ ಶ್ರೀಲಂಕಾದ ಮಾಜಿ ಅಧ್ಯಕ್ಷರ ಪುತ್ರರನ್ನು ಶ್ರೀಲಂಕಾ ಪೋಲೀಸರು ಬಂಧಿಸಿದ್ದಾರೆ. ತಮ್ಮ ತಂದೆಯ ಹೆಸರಿನ ವಿಮಾನ ನಿಲ್ದಾನವನ್ನು ಬಾರತೀಯ ಸಂಸ್ಥೆಗೆ ಕಾನೂನುಬಾಹಿರವಾಗಿ ಮಾರಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.
ಹ್ಯಾಂಬಂಟೂಟ್ ನಲ್ಲಿ ಭಾರತೀಯ ದೂತಾವಾಸದ ಬಳಿ ಕಾನೂನುಬಾಹಿರ ವಾಗಿ ಪ್ರತಿಭಟನೆ ನಡೆಸುತ್ತಿದ್ದರೆನ್ನುವ ಕಾರಣಕ್ಕೆ ವಿಧಾನಸಭಾ ಸದಸ್ಯ, ಸಂಸದ ನಮಲ್ ರಾಜಪಕ್ಷೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಮಾಜಿ ನಾಯಕ ಮಹಿಂದಾ ರಾಜಪಕ್ಸಿಯ ಹಿರಿಯ ಪುತ್ರರಾದ ನಮಲ್ ಪ್ರತಿಬಟನೆ ನಡೆಸಿದ್ದಲ್ಲದೆ  ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಗಾಗಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ರುವಾನ್ ಗುನಶೇಖರ ಹೇಳಿದ್ದಾರೆ.
"ಅವರು ಇಬ್ಬರು ಸಂಸತ್ ಸದಸ್ಯರು ಮತ್ತು ಇತರ ಮೂವರು ವ್ಯಕ್ತಿಗಳೊಡನೆ ಬಂಧಿತರಾದರು" ಗುಣಶೇಕರ್ ಹೇಳಿದರು. ಪ್ರತಿಭಟನೆಯ ಬಳಿಕ ಪೊಲೀಸರು 28 ಜನರನ್ನು ಬಂಧಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವೀಡಿಯೋ ಫೂಟೇಜ್ ನಲ್ಲಿ ಕೊಲಂಬೊಕ್ಕೆ ದಕ್ಷಿಣದ 240 ಕಿಲೋಮೀಟರ್ (150 ಮೈಲು) ದೂರದಲ್ಲಿರುವ ಹ್ಯಾಂಬಂಟೋಟ್ ನಲ್ಲಿ ಪ್ರತಿಭತನಾಕಾರರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದರು ಮತ್ತು ಭಾರತೀಯ ದೂತಾವಾಸದ ಬಳಿ ಮೆರವಣಿಗೆ ನಡೆಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ ಏನೂ ಉಳಿಯಲ್ಲ, ಯುರೇನಿಯಂ ಕೊಟ್ಬಿಡಿ; ಇರಾನ್ ಗೆ ಮತ್ತೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಯುರೇನಿಯಂ ಹಸ್ತಾಂತರ, ಪರಮಾಣು ನಿರ್ಬಂಧ: 5 ಷರತ್ತುಗಳನ್ನು ಇರಾನ್ ಮುಂದಿಟ್ಟ ಅಮೆರಿಕ!

IPL 2026: ನಿರಾಶೆಯಾಗಿದೆ.. ಆದ್ರೆ ಮತ್ತೆ ಸೂರ್ಯೋದಯವಾಗುತ್ತದೆ: RCB ಬಳಿಕ ಭಾವುಕ ಶ್ರೇಯಸ್ ಅಯ್ಯರ್ ಹೇಳಿಕೆ!

IPL 2026: 'It’s okay ಮತ್ತೆ ಈ ರೀತಿ ಮಾಡ್ಬೇಡ': 49 ಎಂದು ಗೇಲಿ ಮಾಡಿದ್ದ ಪಂಜಾಬ್ ಗೆ ಬಟ್ಟೆ ಸುತ್ತಿ ಹೊಡೆದ RCB

IPL 2026: ಕೊನೆಯ ಓವರ್ ನಲ್ಲಿ ಭರ್ಜರಿ ಜಯ, ಪ್ಲೇಆಫ್ ಗೆ RCB ಲಗ್ಗೆ; ರೇಸ್ ನಿಂದ PBKS ಔಟ್, CSK ಆಸೆ ಜೀವಂತ!

SCROLL FOR NEXT