ವಾಷಿಂಗ್ಟನ್: ಈ ಹಿಂದೆಂದಿಗಿಂತಲೂ ಪ್ರಸ್ತುತ ಭಾರತದಲ್ಲಿ ವ್ಯವಹಾರ ನಡೆಸುವ ಪರಿಸ್ಥಿತಿ ಬದಲಾಗಿದ್ದು. ಉಧ್ಯಮ ಪರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಅಮೆರಿಕದ ವಾಷಿಂಗ್ಟನ್ ನಲ್ಲಿ ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಮತ್ತು ಪಾರ್ಟ್ನರ್ ರ್ಶಿಪ್ ಫೋರಮ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೇಟ್ಲಿ, ಭಾರತದಲ್ಲಿ ವ್ಯವಹಾರ ನಡೆಸುವ ಪರಿಸ್ಥಿತಿ ಬದಲಾಗಿದ್ದು. ಉಧ್ಯಮ ಪರ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮುಂದಿನ ಎರಡ ದಶಕಗಳಲ್ಲಿ ಭಾರತ ಬಲಾಢ್ಯ ಆರ್ಥಿಕ ರಾಷ್ಟ್ರವಾಗಲಿದೆ. ಪ್ರಸ್ತುತ ಕೇಂದ್ರ ಸರ್ಕಾರ ಅರ್ಥ ವ್ಯವಸ್ಥೆದೆ ಸರಣಿ ರಚನಾತ್ಮಕ ಸುಧಾರಣೆಗಳು ತರುತ್ತಿದೆ. ಹೀಗಾಗಿ ಭಾರತದಲ್ಲಿ ವಿಶ್ವದ ವಿವಿಧ ಮೂಲಗಳಿಂದೆ ಉಧ್ಯಮಿಗಳು ಮತ್ತು ಬಂಡವಾಳದಾರರು ಭಾರತದಲ್ಲಿ ಹೂಡಿಕೆ ಮಾಡತ್ತಿದ್ದಾರೆ.
ಭಾರತದಲ್ಲಿ ಹೂಡಿಕೆ ಮಾಡುವವರಿಗಾಗಿ ಕೇಂದ್ರ ಸರ್ಕಾರ ಅವಕಾಶಗಳ ಮಹಾಪೂರವನ್ನೇ ಒದಗಿಸುತ್ತಿದೆ. 2014ರಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದಾಗ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಪ್ಪು ಆರ್ಥಿಕತೆಯನ್ನು ಮುಂದುವರೆಸಲು ನಾನಾ ಯೋಜನೆ ರೂಪಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಕೇಂದ್ರ ಸರ್ಕಾರ ಸಾಕಷ್ಟು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದರಿಂದ ಅವರ ಪ್ರಯತ್ನಗಳು ಸಫಲವಾಗಿಲ್ಲ. ಪ್ರಸ್ತುತ ಭಾರತ ಸರ್ಕಾರದ ನಿರ್ಧಾರಗಳಿಂದಾಗಿ ಆರ್ಥಕ ಅಭಿವೃದ್ಧಿ ಕುಂಠಿತವಾಗಿರಬಹುದು. ಆದರೆ ದೀರ್ಘಅವಧಿಗೆ ಇದು ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದರು.
ಅಂತೆಯೇ ಮುಂದಿನ ಭಾರತದ ಆರ್ಥಿಕ ಸದೃಡತೆಗೆ ಬುನಾದಿಯಾಗಲಿದೆ. ಕೇಂದ್ರ ಸರ್ಕಾರ ಹೂಡಿಕೆದಾರ ಸ್ವೇಹಿ ವಾತಾವರಣ ನಿರ್ಮಿಸಲು ಮುಂದಾಗಿದೆ. ಭಾರತದಲ್ಲಿ ವಾಣಿಜ್ಯ ಉದ್ಯಮ ನಡೆಸುವ ನಿಮಿತ್ತ ಸರ್ಕಾರ ಕೆಲ ದಿಟ್ಟ ನಿರ್ಧಾರಗಳನ್ನು ಕೈಗೊಂಡಿದೆ. ಪ್ರಸ್ತುತ ಭಾರತ ವಿಶ್ವದ ಹೆಚ್ಚು ಮುಕ್ತ, ಜಾಗತಿಕವಾಗಿ ಸಂಯೋಜಿತ ಆರ್ಥಿಕತೆಯನ್ನು ಹೊಂದಿದೆ ರಾಷ್ಟ್ರಗಳಲ್ಲಿ ಒಂದಾಗಿದೆ. ಮುಂದಿನ 2 ದಶಕಗಳಲ್ಲಿ ಭಾರತ ಸದೃಢ ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ ಎಂದು ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics