ವಿದೇಶ

ಯಾವುದೇ ಕ್ಷಣ ಅಣು ಸಮರ ನಡೆಸಬಹುದು; ಮತ್ತೆ ಬೆದರಿಕೆ ಹಾಕಿದ ಉತ್ತರ ಕೊರಿಯಾ

Manjula VN

ವಿಶ್ವಸಂಸ್ಥೆ: ಪದೇ ಪದೇ ಯುದ್ಧೋತ್ಸಾಹ ತೋರುತ್ತಿರುವ ಉತ್ತರಕೊರಿಯಾ ಮತ್ತೆ ತನ್ನ ಉದ್ಧಟತನವನ್ನು ಪ್ರದರ್ಶಿಸಿದ್ದು, ಕೊರಿಯಾ ಉಪಖಂಡದಲ್ಲಿ ಯಾವುದೇ ಕ್ಷಣ ಕ್ಷಣ ಅಣು ಸಮರ ನಡೆಸಬಹುದು ಎಂದು ಮತ್ತೆ ಬೆದರಿಕೆ ಹಾಕಿದೆ. 

ವಿಶ್ವಸಂಸ್ಥೆಯ ಸಾಮಾನ್ಯ ಮಂಡಳಿ ನಿಶಸ್ತ್ರೀಕರಣ ಸಮಿತಿಗೆ ಉತ್ತರ ಕೊರಿಯಾ ಉಪ ರಾಯಭಾರಿ ಕಿಮ್-ಇನ್-ರಿಯೋಂಗ್ ಅವರು ಈ ರೀತಿಯ ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ. 

ಸ್ವರಕ್ಷಣೆಗಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಹಕ್ಕು ಉತ್ತರ ಕೊರಿಯಾಗಿದೆ. 1970ರ ಬಳಿಕ ತೆಗೆದುಕೊಂಡಿರುವ ಅತ್ಯಂತ ಗಂಭೀರ ನಿರ್ಣಯ ಇದಾಗಿದ್ದು, ವಿಶ್ವಸಂಸ್ಥೆಯಲ್ಲಿಯೇ ಇಷ್ಟು ನೇರವಾಗಿ ಅಣು ಸಮರದ ಬೆದರಿಕೆ ಹಾಕುತ್ತಿರುವ ವಿನಾಶಕಾರಿ ದೇಶ ಉತ್ತರ ಕೊರಿಯಾ. ಅಣ್ವಸ್ತ್ರ ಬಳಕೆ, ಅಣು ಸಮರಕ್ಕೆ ನಾಂದಿ ಹಾಡಿದರೂ ಅಚ್ಚರಿ ಪಡಬೇಕಾಗಿಲ್ಲ. 

ಉತ್ತರ ಕೊರಿಯಾ ಪ್ರತೀ ವರ್ಷ ದೊಡ್ಡ ಪ್ರಮಾಣ ಸಮಾರಾಭ್ಯಾಸ ನಡೆಸುತ್ತಿದ್ದು, ನಮ್ಮ ಮೇಲುಗೈಯನ್ನು ಹತ್ತಿಕ್ಕಲು ಅಮೆರಿಕ ರಹಸ್ಯ ಕಾರ್ಯಾಚರಣೆಗೆ ಮುಂದಾಗಿದೆ. ಅಮೆರಿಕ ಮುಖ್ಯ ಭೂ ಪ್ರದೇಶಗಳು ನಮ್ಮ ಗುರಿಯಲ್ಲಿದ್ದು, ನಮ್ಮ ಪವಿತ್ರ ಗಡಿಭಾಗದ ಒಂದಿಂಚು ಭೂಮಿಯನ್ನು ಅಮೆರಿಕ ಅತಿಕ್ರಮಣ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದರೆ, ತಕ್ಕ ಶಾಸ್ತಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಇತ್ತೀಚೆಗಷ್ಟೇ ಉತ್ತರ ಕೊರಿಯಾ ಪದೇ ಪದೇ ಪರಮಾಣು ಬಾಂಬ್ ಮತ್ತು ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ನಡೆಸುತ್ತಿರುವುದು ಇದೀಗ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. 
SCROLL FOR NEXT