ಲಂಡನ್: ದೀಪಾವಳಿ ಜೀವನ ವಿಧಾನವನ್ನು ಆಚರಿಸುವ ಹಬ್ಬವಾಗಿದ್ದು, ಹಿಂದೂ ಸಂಸ್ಕೃತಿಯನ್ನು ಅತ್ಯುತ್ತಮ ರೀತಿಯಲ್ಲಿ ತಿಳಿಸುತ್ತದೆ ಎಂದು ಬ್ರಿಟನ್ ಪ್ರಧಾನಿ ಥೆರೇಸಾ ಮೇ ಹೇಳಿದ್ದಾರೆ.
ಎನ್ ಆರ್ ಐ ಉದ್ಯಮಿಗಳಾದ ಹಿಂದುಜಾ ಬ್ರದರ್ಸ್ ಆಯೋಜಿಸಿದ್ದ ದೀಪಾವಳಿ ಹಬ್ಬದ ಸಂದೇಶ ನೀಡಿರುವ ಬ್ರಿಟನ್ ಪ್ರಧಾನಿ ಥೆರೇಸಾ ಮೇ ದೀಪಾವಳಿ ನಮ್ಮ ಜೀವನವನ್ನು ಅವಲೋಕಿಸಿ, ಭವಿಷ್ಯವನ್ನು ಬದಲಾವಣೆ ಮಾಡಿಕೊಳ್ಳಲು ನಮ್ಮೆಲ್ಲರಿಗೂ ಅವಕಾಶ ನೀಡುತ್ತದೆ. ದೀಪಾವಳಿ ಜೀವನ ವಿಧಾನವನ್ನು ಆಚರಿಸುವ ಹಬ್ಬವಾಗಿದೆ ಎಂದು ಮೇ ಅಭಿಪ್ರಾಯಪಟ್ಟಿದ್ದಾರೆ.