ಆಫ್ಘಾನಿಸ್ತಾನದಲ್ಲಿ 2 ಆತ್ಮಾಹುತಿ ದಾಳಿ: 60ಕ್ಕೂ ಹೆಚ್ಚು ಮಂದಿ ಸಾವು
ಅಫ್ಘಾನಿಸ್ತಾನಾದ ರಾಜಧಾನಿ ಕಾಬೂಲ್'ನಲ್ಲಿರುವ ಶಿಯಾ ಮಸೀದಿ ಮತ್ತು ಘೋರ್ ಪ್ರಾಂತ್ಯದಲ್ಲಿರುವ ಸುನ್ನಿ ಮಸೀದಿ ಮೇಲಿನ 2 ಆತ್ಮಾಹುತಿ ದಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು...
ಕಾಬೂಲ್: ಅಫ್ಘಾನಿಸ್ತಾನಾದ ರಾಜಧಾನಿ ಕಾಬೂಲ್'ನಲ್ಲಿರುವ ಶಿಯಾ ಮಸೀದಿ ಮತ್ತು ಘೋರ್ ಪ್ರಾಂತ್ಯದಲ್ಲಿರುವ ಸುನ್ನಿ ಮಸೀದಿ ಮೇಲಿನ 2 ಆತ್ಮಾಹುತಿ ದಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಶನಿವಾರ ತಿಳಿದುಬಂದಿದೆ.
ಕಾಬಮ್ ಇಮಾಮ್ ಜಮಾನ್ ಮಸೀದಿಯಲ್ಲಿ 30 ಮಂದಿ ಸಾವನ್ನಪ್ಪಿದ್ದು, 45 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘೋರ್ ಪ್ರಾಂತ್ಯದಲ್ಲಿನ ಮಸೀದಿ ಮೇಲಿನ ದಾಳಿಯಲ್ಲಿ 30 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆಂದು ತಿಳಿದುಬಂದಿದೆ.
ಉಗ್ರರ ಎರಡೂ ದಾಳಿಯನ್ನು ಆಫ್ಘಾನಿಸ್ತಾನದ ಅಧ್ಯಕ್ಷ ಆಶ್ರಫ್ ಘಾನಿ ಖಂಡಿಸಿದ್ದಾರೆ. ದಾಳಿಯ ಹೊಣೆಯನ್ನು ಈ ವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.