ವಿದೇಶ

ಪನಾಮಾ ಪೇಪರ್ಸ್ ಹಗರಣ: ಪದಚ್ಯುತ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

Raghavendra Adiga
ಇಸ್ಲಾಮಾಬಾದ್: ಪನಾಮ ಪೇಪರ್ಸ್ ಭ್ರಷ್ಟಾಚಾರದ ಎರಡು ಪ್ರಕರಣಗಳಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಗೆ ಅಲ್ಲಿನ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿದೆ ಎಂದು ಷರೀಫ್ ಪರ ವಕೀಲರು ಹೇಳಿದ್ದಾರೆ.
ಎರಡು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಮಾಜಿ ಪ್ರಧಾನಿಗಳಿಗೆ ಇಂದು ಜಾಮೀನು ಸಹಿತ ವಾರಂಟ್ ಗಳನ್ನು ಜಾರಿಗೊಳಿಸಿದ ನ್ಯಾಯಾಲಯವು ನ.3 ರವರೆಗೆ ವಿಚಾರಣೆಯನ್ನು ಮುಂದೂಡಿದೆ" ಎಂದು ವಕೀಲರಾದ ಜಾಫೀರ್ ಖಾನ್ ಎ ಎಫ್ ಪಿ ಗೆ ತಿಳಿಸಿದ್ದಾರೆ.
ಸದ್ಯ ಷರೀಫ್ ಅವರ ಪತ್ನಿ ಕಲ್ಸಮ್ ಅವರೊಡನೆ ಲಂಡನ್ ನಲ್ಲಿ  ನೆಲೆಸಿದ್ದು ಕ್ಯಾನ್ಸರ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 
SCROLL FOR NEXT